ಕಳ್ತೂರಿಗೆ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

Update: 2019-12-09 16:58 GMT

ಉಡುಪಿ, ಡಿ.9: ತಾಲೂಕಿನ ಕಳ್ತೂರು ಗ್ರಾಪಂನ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಸ್ಥಾನವನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಹ ಮಹಿಳಾ ಸಾಮಾನ್ಯ ಅಭ್ಯರ್ಥಿಯಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿ ಎಸೆಸೆಲ್ಸಿ ತೇರ್ಗಡೆಗೊಂಡಿದ್ದು, ಅದೇ ಗ್ರಾಪಂ ವ್ಯಾಪ್ತಿಯಲ್ಲಿ ವಾಸ್ತವ್ಯದಲ್ಲಿರಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಇತರೆ ದೃಢೀಕೃತ ದಾಖಲೆಗಳನ್ನು ಪಂಚಾಯತಿಗೆ ಸಲ್ಲಿಸಲು ಡಿ.26 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಕಳ್ತೂರು ಗ್ರಾಪ (ದೂರವಾಣಿ ಸಂಖ್ಯೆ: 0820-2574880) ಅಥವಾ ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ (ದೂರವಾಣಿ:0820-2523438) ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News