30 ಸಾವಿರ ಕಿ.ಗ್ರಾಂ. ನಕಲಿ ಜೀರಿಗೆ ವಶ

Update: 2019-12-10 14:19 GMT
ಸಾಂದರ್ಭಿಕ ಚಿತ್ರ

ರಾಯ್‌ಬರೇಲಿ, ಡಿ. 10: ಪೊರಕೆಯ ಚೂರು, ಕಾಕಂಬಿ, ಹುಲ್ಲು, ಕಲ್ಲಿನ ಹುಡಿ ಬಳಸಿ ತಯಾರಿಸಲಾದ 30 ಸಾವಿರ ಕಿ.ಗ್ರಾಂ. ಜೀರಿಗೆ ಕಾಳನ್ನು ಪೊಲೀಸರು ಉತ್ತರಪ್ರದೇಶದ ರಾಯ್ ಬರೇಲಿಯಿಂದ ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ ತನಿಖೆ ಆರಂಭಿಸಿದ್ದಾರೆ. ವಶಪಡಿಸಿಕೊಳ್ಳಲಾದ ಈ ನಕಲಿ ಜೀರಿಗೆ ಮಾರುಕಟ್ಟೆಯಲ್ಲಿ 60 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ.

 ‘‘ಜಿಲ್ಲೆಯ ಮಹಾರಾಜ್‌ಗಂಜ್ ಪ್ರದೇಶದಲ್ಲಿ ತಾತ್ಕಾಲಿಕ ಅಲೆಮನೆಗೆ ದಾಳಿ ನಡೆಸಿದ ಸಂದರ್ಭ ಈ ನಕಲಿ ಜೀರಿಗೆ ಪತ್ತೆಯಾಯಿತು’’ ಎಂದು ಮಹಾರಾಜ್ ಗಂಜ್ ಪೊಲೀಸ್ ಅಧೀಕ್ಷಕ ವಿನೀತ್ ಸಿಂಗ್ ತಿಳಿಸಿದ್ದಾರೆ.

ಇದೇ ರೀತಿಯ ದಂಧೆಯನ್ನು ಕಳೆದ ತಿಂಗಳು ದಿಲ್ಲಿಯಲ್ಲಿ ಭೇದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News