ನಿರ್ಭಯಾ ಪ್ರಕರಣ: ಮರಣ ದಂಡನೆಯ ಮರುಪರಿಶೀಲನೆ ಕೋರಿ ದೋಷಿ ಅಕ್ಷಯ್ ಕುಮಾರನಿಂದ ಸುಪ್ರೀಂಗೆ ಅರ್ಜಿ

Update: 2019-12-10 16:16 GMT

ಹೊಸದಿಲ್ಲಿ, ಡಿ.10: 2012ರ ನಿರ್ಭಯಾ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ ದೋಷಿಗಳ ಪೈಕಿ ಅಕ್ಷಯ ಕುಮಾರ ಸಿಂಗ್ ಎಲ್ಲ ನಾಲ್ವರಿಗೂ ಮರಣ ದಂಡನೆಯನ್ನು ವಿಧಿಸಿರುವ 2017ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಂಗಳವಾರ ಅರ್ಜಿಯನ್ನು ಸಲ್ಲಿಸಿದ್ದಾನೆ. ಪ್ರಕರಣದ ಇತರ ಮೂವರು ದೋಷಿಗಳಾದ ಮುಕೇಶ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು 2018,ಜು.9ರಂದು ತಿರಸ್ಕರಿಸಿತ್ತು. ಆಗ ಅಕ್ಷಯ ಅರ್ಜಿಯನ್ನು ಸಲ್ಲಿಸಿರಲಿಲ್ಲ.

ವಿಚಾರಣಾ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯ ಆರೋಪಿಗಳಿಗೆ ವಿಧಿಸಿದ್ದ ಮರಣ ದಂಡನೆಯನ್ನು ಸರ್ವೋಚ್ಚ ನ್ಯಾಯಾಲಯವು ತನ್ನ 2017ರ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.

ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬಾತ ಇಲ್ಲಿಯ ತಿಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣದಲ್ಲಿ ಯ ಬಾಲಾಪರಾಧಿಯನ್ನು ಮೂರು ವರ್ಷ ರಿಮಾಂಡ್ ಹೋಮ್ ವಾಸದ ಬಳಿಕ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News