'ಸಿಬೋನ್ ಕಂಪೆನಿ ಕುವೈತ್' ಎಫ್ ಡಿಎಚ್ (ಜೆವಿ) ಅಲ್ ಝೂರ್ ಕ್ರಿಕೆಟ್ ಚಾಂಪಿಯನ್

Update: 2019-12-11 06:29 GMT

ಕುವೈತ್ : ಇಲ್ಲಿನ ಪ್ರಸಿದ್ಧ ತೈಲೋತ್ಪನ್ನ ಕೇಂದ್ರವಾದ ಅಲ್ ಝೂರ್ ನಲ್ಲಿ ಕಳೆದ ಮೂರು ತಿಂಗಳುಗಳಿಂದ ಕುವೈತ್ ನ ಹತ್ತು ಬಲಿಷ್ಠ ಸಬ್ ಕಾಂಟ್ರಾಕ್ಟ್ ಕಂಪೆನಿಗಳಾದ ಐಎಂಸಿಒ, ಎನ್ಎಸ್ಎಚ್, ಎಫ್ ಡಿಎಚ್, ಡಿಎಇಡಬ್ಲ್ಯೂಒಒ, ಎಸ್ ಯುಎನ್ ಜಿಬಿಒ, ಎಸ್ಇಒಬಿಒಎನ್, ಅಲ್ ಹನ, ಅಲ್ ಗನಿಮ್ ಇಂಟರ್ ನ್ಯಾಷನಲ್, ಎನ್ ಬಿಟಿಸಿ ಮತ್ತು ಎಪ್ ಡಿ ಎಚ್ ರೆಡ್ ತಂಡಗಳ ನಡುವೆ ನಡೆಯುತಿದ್ದ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯಾಟ ಇತ್ತೀಚೆಗೆ ಅಲ್ ಝೂರ್ ನ  ಗ್ಲೋಬಲ್ ವಿಲೇಜ್ ಕ್ರೀಡಾಂಗಣ‌ದಲ್ಲಿ ನಡೆಯಿತು.

ಮಂಗಳೂರು ಮೂಲದ ಯುವ ಆಟಗಾರರನ್ನು ಹೊಂದಿರುವ ಸಿಬೋನ್ ಕಂಪೆನಿ ಕುವೈತ್ ತಂಡ ಸೆಮಿ ಫೈನಲ್ ನಲ್ಲಿ 93 ರನ್ ಗಳಿಂದ ಎನ್ಎಸ್ಎಚ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರೆ ಇನ್ನೊಂದು ಭಾಗದಿಂದ ಎಫ್ ಡಿ ಎಚ್ ರೆಡ್ ತಂಡ ಅಲ್- ಹನಾ ತಂಡವನ್ನು 62  ರನ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಫೈನಲ್ ನಲ್ಲಿ ಸಿಬೋನ್ ಕಂಪೆನಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದರು. ಯೂಸುಫ್ ಇಮ್ರಾನ್ ಅವರ ಶತಕದ ನೆರವಿನಿಂದ ಸಿಬೋನ್ ಕಂಪೆನಿ ತಂಡ 15 ಓವರ್ ಗಳಲ್ಲಿ 206 ರನ್ನುಗಳನ್ನು ಗಳಿಸಿತು. ತಂಡದ ಪರವಾಗಿ ಯೂಸುಫ್ ಇಮ್ರಾನ್ 116 (57), ಉಸ್ಮಾನ್ 66 (27), ದಿವಾಕರ  15 (5) ರನ್ ಗಳಿಸಿದ್ದು, ತಮೀಂ ಉಳ್ಳಾಲ್‌ ನಾಟೌಟ್ 4 (1) ಮುತ್ತು  0 (0) ಔಟಾಗದೇ ಉಳಿದರು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಎಫ್ ಡಿ ಎಚ್ ರೆಡ್ ತಂಡ 160 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲನ್ನು ಒಪ್ಪಿಕೊಂಡು ಸಿಬೋನ್ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಸರಣಿಯ 5 ಪಂದ್ಯಗಳಲ್ಲಿ 332 ರನ್ ಗಳಿಸಿದ ಯೂಸುಫ್ ಇಮ್ರಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಫೈನಲ್ ಪಂದ್ಯದ  ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಸರಣಿಯ ಅತ್ಯುತ್ತಮ ದಾಂಡಿಗ ಪ್ರಶಸ್ತಿಗೆ ಎಫ್ ಡಿಎಚ್ ರೆಡ್ ತಂಡದ  ಹಬೀಬ್ ಶ್ರೀಲಂಕಾ ಅವರು ಭಾಜನರಾದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಫ್ ಡಿ ಎಚ್ ಅಂತರ್ ರಾಷ್ಟ್ರೀಯ ಸಮಿತಿಯ ಸದಸ್ಯೆ ಮಾರ್ಗರೇಟ್ ಸ್ಕೇನ್ ದಕ್ಷಿಣ ಆಫ್ರಿಕಾ,  ಡ್ಯಾನಿ ಡಿಸೋಜಾ  ಮುಂಬೈ,  ಸೋಮನಾಥ್ ದಾಸ್ ತಮಿಳುನಾಡು, ಅಶ್ರಫ್ ಇಸ್ಮಾಯಿಲ್ ಶ್ರೀಲಂಕಾ, ಅನಿಬೇಶ್ ಅಝ್ರಾ ನೇಪಾಳ ಉಪಸ್ಥಿತರಿದ್ದರು.

ಸಿಬೋನ್ ಕಂಪೆನಿ ಕುವೈತ್ ಅನ್ನು ಕಂಪೆನಿಯ ನಿರ್ದೇಶಕ ಎಸ್.ಕೆ. ಕಾಂಗ್, ವೈ.ಕೆ. ಕಿಮ್, ಸಾಂಗ್ ಪೋಯೋಗಾಂಗ್ ಮತ್ತು ವೈವೈಲೀ ಅವರು ಶ್ಲಾಘಿಸಿದರು.

ಕನ್ನಡಿಗರೇ ಅಧಿಕವಾಗಿರುವ ದಕ್ಷಿಣ ಕೊರಿಯಾ ಮೂಲದ ಸಿಬೋನ್ ಕಂಪೆನಿಯಲ್ಲಿ ತಮೀಮ್ ಉಳ್ಳಾಲ್ ಅವರು ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕುವೈತ್ ನ ಜನಪ್ರಿಯ ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News