ಬೀಟ್ ಬಾಕ್ಸ್ ಜೊತೆ ರೂಬಿಕ್ಯೂಬ್ ಪರಿಣಿತನಿಂದ ವಿಶ್ವ ದಾಖಲೆ

Update: 2019-12-11 07:43 GMT

ಮಂಗಳೂರು : ಅಲ್ಪಾವಧಿಯಲ್ಲಿ ಬೀಟ್ ಬಾಕ್ಸ್ ಜೊತೆ ರೂಬಿಕ್ಯೂಬ್ ಸರಿಹೊಂದಿಸುವ ಸಾಧನೆಯ ಮೂಲಕ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ವಿಶ್ವಾಸ್ ಶಿವಕುಮಾರ್ ವಿಶ್ವ ದಾಖಲೆ ಮಾಡಿದ್ದಾರೆ.

ನವೆಂಬರ್  4 ರಂದು ಎಕ್ಸಕ್ಲೂಸಿವ್ ಸಂಸ್ಥೆ ಆತನ ಸಾಧನೆಯನ್ನು ದಾಖಲಿಸಿದೆ. ವಿಶ್ವಾಸ್ ಶಿವಕುಮಾರ್ ಕೇವಲ 1ನಿಮಿಷ 10ಸೆಕುಂಡುಗಳಲ್ಲಿ ಬೀಟ್ ಬಾಕ್ಸ್ ಜೊತೆ ರೂಬಿಕ್ಯೂಬ್ ಸಮಸ್ಯೆ ಯನ್ನು ಪರಿಹರಿಸಿ ಈ ದಾಖಲೆ ಮಾಡಿದ್ದಾರೆ. ಈತನ ಸಾಧನೆಗೆ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಸಿಕ್ಕಿದೆ.

ಇವರು ಮೂಲತಃ ಬೆಂಗಳೂರಿನವರಾಗಿದ್ದು ವಿದ್ಯಾರ್ಜನೆಗಾಗಿ ಮಂಗಳೂರಿಗೆ ಬಂದು ಸ್ವರೂಪ ಅಧ್ಯಯನ ಕೇಂದ್ರ ಮಲ್ಟಿ ಟ್ಯಾಲೆಂಟ್ ಸಂಸ್ಥೆಗೆ ಸೇರಿದ್ದರು. ಈ ವಿದ್ಯಾ ಸಂಸ್ಥೆಗೆ ಸೇರಿದ ಮೇಲೆ ಈ ಯುವಕನಿಗೆ ಸಾಧನೆ ಮಾಡುವ ಛಲ ಬಂದಿದೆ. ಪರಿಣಾಮ ವರ್ಲ್ಡ್‌ ರೆಕಾರ್ಡ್ ಬರೆದಿದ್ದಾರೆ. ಏಕಕಾಲದಲ್ಲಿ ಬೀಟ್ ಬಾಕ್ಸಿಂಗ್ ಜೊತೆ ರೂಬಿಕ್ ಕ್ಯೂಬ್ ಪರಿಹರಿಸಿ ಕೊಡಬಲ್ಲ ಸಾಮರ್ಥ್ಯದ ಮೂಲಕ ಪ್ರಪಂಚದಲ್ಲೇ ಈ ಕ್ಷೇತ್ರದಲ್ಲಿ ಮೊದಲ  ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಈ ವಿದ್ಯಾರ್ಥಿಯ ಅದ್ಭುತ ಕಲೆಗೆ ಕಾಲೇಜು ಕೂಡಾ ಸಕರಾತ್ಮಕ ವೇದಿಕೆ ಕಲ್ಪಿಸಿ ಕೊಟ್ಟಿತು. ಅವರಿಗೆ ಸ್ನೇಹಿತರು, ಮನೆಯವರು, ಕಾಲೇಜಿನ ಆಡಳಿತ ಮಂಡಳಿ ಸೇರಿ ಬೆಂಬಲ ನೀಡಿದ್ದಾರೆ. ಇದೀಗ ವಿಶ್ವದಾಖಲೆ ಮಾಡಿರುವ ವಿದ್ಯಾರ್ಥಿ ವಿಶ್ವಾಸ್ ರ ಸಾಧನೆ ಕರಾವಳಿ ಮಾತ್ರವಲ್ದೇ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ವಿಶ್ವಾಸ್  ಕೆಲಸಕ್ಕೆ ಹೋಗಿ ಸಂಜೆ ಕಾಲೇಜು ಕಲಿತು ಬಿಡುವಿನ ವೇಳೆಯಲ್ಲಿ ಈ ಮಟ್ಟದ ಸಾಧನೆಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News