ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

Update: 2019-12-11 18:04 GMT

 ದಿಂಡಿಗಲ್, ಡಿ.11: ತಮಿಳುನಾಡು ವಿರುದ್ಧ ರಣಜಿ ಟ್ರೋಫಿ ಗ್ರೂಪ್ ಬಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ.

ಪಂದ್ಯದ ಮೂರನೇ ದಿನವಾಗಿರುವ ಬುಧವಾರ ಅನುಭವಿಸಿ ದಿನೇಶ್ ಕಾರ್ತಿಕ್(113) ಶತಕದ ಹೊರತಾಗಿಯೂ ತಮಿಳುನಾಡು ತಂಡ ಹಿನ್ನಡೆ ಅನುಭವಿಸಿತು.

ಕರ್ನಾಟಕದ ಕೃಷ್ಣಪ್ಪ ಗೌತಮ್ ಅವರು 110ಕ್ಕೆ 6 ವಿಕೆಟ್ ಉಡಾಯಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 29 ರನ್‌ಗಳ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 23ಕ್ಕೆ 3 ವಿಕೆಟ್ ಕಳೆದುಕೊಂಡರೂ, ಬಳಿಕ ಚೇತರಿಸಿಕೊಂಡು ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 89 ರನ್ ಗಳಿಸಿತು.

165ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ತಮಿಳುನಾಡು ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ದಿನೇಶ ಕಾರ್ತಿಕ್ ಅವರು 5ನೇ ವಿಕೆಟ್‌ಗೆ ಎನ್. ಜಗದೀಶನ್ ಜೊತೆ 58 ರನ್‌ಗಳ ಜೊತೆಯಾಟ ನೀಡಿದರು. ಆರಂಭದಲ್ಲಿ ತಮಿಳುನಾಡು ತಂಡದ ಆಟಗಾರರು ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುತ್ತಿದ್ದರೂ, ಕಾರ್ತಿಕ್ ಹೋರಾಟ ನಡೆಸಿದರು. ಅಂತಿಮವಾಗಿ ತಮಿಳುನಾಡು ತಂಡ 109.3 ಓವರ್‌ಗಳಲ್ಲಿ 307 ರನ್‌ಗಳಿಗೆ ಆಲೌಟಾಯಿತು.

ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಅಗ್ರ ಸರದಿಯ ವಿಕೆಟ್‌ಗಳನ್ನು ಬೇಗನೆ ಕೈ ಚೆಲ್ಲಿತು.

ಮಧ್ಯಮ ವೇಗಿ ಕೆ.ವ್ನಿೇಶ್ ದಾಳಿಗೆ ಸಿಲುಕಿದ ಕರ್ನಾಟಕ ತಂಡಕ್ಕೆ ದೊಡ್ಡ ಮೊತ್ತವನ್ನು ಸೇರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಡಿ. ನಿಶ್ಚಲ್ (4), ನಾಯಕ ಕರುಣ್ ನಾಯರ್(5) ಮಯಾಂಕ್ ಅಗರ್‌ವಾಲ್(8), ಪವನ್ ದೇಶಪಾಂಡೆ(20) ಬೇಗನೆ ಔಟಾದರು.

ದೇವದತ್ತ ಪಡಿಕ್ಕಲ್ ಔಟಾಗದೆ 20 ರನ್ ಮತ್ತು ಬಿ.ಆರ್.ಶರತ್ ಔಟಾಗದೆ 25 ರನ್ ಗಳಿಸಿ ಬ್ಯಾಟಿಂಗ್‌ನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ.

ತಮಿಳುನಾಡಿನ ವ್ನಿೇಶ್ ಮತ್ತು ಆರ್.ಅಶ್ವಿನ್ ತಲಾ 2 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News