ಅಫ್ಘಾನಿಸ್ತಾನ ತಂಡದ ನಾಯಕರಾಗಿ ಅಸ್ಗರ್ ಅಫ್ಘಾನ್

Update: 2019-12-11 18:16 GMT

ಹೊಸದಿಲ್ಲಿ, ಡಿ.11: ಮಾಜಿ ನಾಯಕ ಅಸ್ಗರ್ ಅಫ್ಘಾನ್ ಅವರನ್ನು ಮತ್ತೆ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ .

2019ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತ್ತಾನ ನಿರ್ಗಮನದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿಗೂ ತಂಡವನ್ನು ರಶೀದ್ ಖಾನ್ ಮುನ್ನಡೆಸುತ್ತಿದ್ದರು. ಅಸ್ಗರ್ ಉಪನಾಯಕರಾಗಿದ್ದರು.

ಇದೀಗ ಅನರೀಕ್ಷಿತವಾಗಿ ತಂಡದ ನಾಯಕತ್ವ ಬದಲಾಗಿದೆ. ನಾಯಕತ್ವ ಬದಲಾವಣೆಗೆ ಕಾರಣ ಗೊತ್ತಾಗಿಲ್ಲ. ಇದಕ್ಕೂ ಮೊದಲು 2019ರ ಜುಲೈನಲ್ಲಿ ಗುಲ್ಬಾದಿನ್ ನೈಬ್ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು. ಬಳಿಕ ರಶೀದ್ ಖಾನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು.

ಎಸಿಬಿ ವಿಶ್ವಕಪ್‌ಗೆ ಕೇವಲ ಮೂರು ತಿಂಗಳ ಮೊದಲು ಅಸ್ಗರ್ ಅವರನ್ನು ನಾಯಕತ್ವದ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಗುಲ್ಬಾದಿನ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಈ ಕ್ರಮವು ಅಭಿಮಾನಿಗಳು ಮತ್ತು ಅಪ್ಘಾನಿಸ್ತಾನದ ಆಟಗಾರರಿಂದ ವ್ಯಾಪಕ ಟೀಕೆಗೆ ಒಳಗಾಗಿತ್ತು. ಅಸ್ಗರ್ ಯಾವಾಗಲೂ ತನ್ನ ನಾಯಕನಾಗಿರುತ್ತಾನೆ ಎಂದು ಗುಲ್ಬಾದೀನ್ ನೈಬ್ ಸ್ವತಃ ಹೇಳಿಕೊಂಡಿದ್ದಾರೆ. ರಶೀದ್ ಮತ್ತು ಹಿರಿಯ ಆಟಗಾರ ಮುಹಮ್ಮದ್ ನಬಿ ಕೂಡ ಈ ನೇಮಕಾತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಅಫ್ಘಾನಿಸ್ತಾನ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾದ ನಂತರ ಎಸಿಬಿ ಯುವ ರಶೀದ್‌ಗೆ ಅಧಿಕಾರವನ್ನು ಹಸ್ತಾಂತರಿಸಲು ನಿರ್ಧರಿಸಿತು, ಅಸ್ಗರ್ ಅಪ್ಘನ್ ಉಪನಾಯಕನಾಗಿ. ರಶೀದ್ ಆಗಲೇ ಟ್ವೆಂಟಿ-20 ತಂಡದ ನಾಯಕರಾಗಿದ್ದಾರೆ. ರಹ್ಮತ್ ಷಾ ಟೆಸ್ಟ್ ನಾಯಕರಾಗಿದ್ದರು.

ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನವು ನಿರಾಶಾದಾಯಕ ಅಭಿಯಾನವನ್ನು ಹೊಂದಿದ್ದು, ಎಲ್ಲಾ ಒಂಬತ್ತು ಲೀಗ್ ಪಂದ್ಯಗಳನ್ನು ಕಳೆದುಕೊಂಡು ಕೊನೆಯ ಸ್ಥಾನದಲ್ಲಿತ್ತು. ಒಟ್ಟು 12 ಏಕದಿನ ಪಂದ್ಯಗಳಲ್ಲಿ ನೈಬ್ ತಂಡವನ್ನು ಮುನ್ನಡೆಸಿದರು. ಇದರಲ್ಲಿ ಅವರು ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು ಮತ್ತು 10 ರಲ್ಲಿ ಸೋತರು.

ಮತ್ತೊಂದೆಡೆ, ಅಸ್ಗರ್ ಅಫ್ಘಾನ್ 56 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಅವರಲ್ಲಿ 36 ಪಂದ್ಯಗಳನ್ನು ಗೆದ್ದರು ಮತ್ತು ಕೇವಲ 21 ರಲ್ಲಿ ಸೋತರು. ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಅವರು ಭಾರತದ ವಿರುದ್ಧದ ಪಂದ್ಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News