ಚಾಂಪಿಯನ್ಸ್ ಲೀಗ್: ಇಂಟರ್ ಮಿಲಾನ್‌ಗೆ 2-1 ಅಂತರದಲಿ್ಲ ಸೋಲುಣಿಸಿದ ಬಾರ್ಸಿಲೋನಾ

Update: 2019-12-11 18:23 GMT

ಮಿಲಾನ್, ಡಿ.11: ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಮಂಗಳವಾರ ಇಂಟರ್ ಮಿಲಾನ್ ತಂಡಕ್ಕೆ ಬಾರ್ಸಿಲೋನಾ 2-1 ಗೋಲುಗಳಿಂದ ಸೋಲುಣಿಸಿದೆ.

ಹದಿನೇಳರ ಹರೆಯದ ಫಾತಿ ಗೋಲು ದಾಖಲಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅವರು ಚಾಂಪಿಯನ್ಸ್ ಲೀಗ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಗೋಲ್ ಸ್ಕೋರರ್ ಎನಿಸಿಕೊಂಡರು.

ಈ ವರ್ಷ ತಂಡಕ್ಕೆ ಸೇರಿದ ಇಬ್ಬರು ಯುವ ಆಟಗಾರರಲ್ಲಿ ಫಾತಿ ಒಬ್ಬರು. ಬಾರ್ಸಿಲೋನಾ ಈಗಾಗಲೇ ಗ್ರೂಪ್ ಎಫ್ ಅನ್ನು ಗೆದ್ದಿದೆ. ಆರು ಬಾರಿ ಬ್ಯಾಲನ್ ಡಿ ಓರ್ ಜಯಿಸಿದ ಲಿಯೋನೆಲ್ ಮೆಸ್ಸಿ ಸೇರಿದಂತೆ ಸ್ಪೇನ್‌ನ ತಂಡವು ಈ ಪಂದ್ಯದಲ್ಲಿ ಹಲವು ಮಂದಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತು.

23ನೇ ನಿಮಿಷದಲ್ಲಿ ಬಾರ್ಸಿಲೋನಾದ ಕಾರ್ಲೆಸ್ ಪೆರೆಝ್ ಗೋಲು ಗಳಿಸಿ ಬಾರ್ಸಿಲೋನಾ ತಂಡಕ್ಕೆ 1-0 ಮುನ್ನಡೆಗೆ ನೆರವಾದರು. ಬಾರ್ಸಿಲೋನಾಕ್ಕೆ 10 ನಿಮಿಷಗಳ ನಂತರ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಬಹುದಿತ್ತು ಆದರೆ ಅವಕಾಶ ಕೈ ಜಾರಿತು.

44ನೇ ನಿಮಿಷದಲ್ಲಿ ರೊಮೆಲು ಲುಕಾಕ್ ಇಂಟರ್ ಬಾರ್ಸಿಲೋನಾ ಪರ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ತಂಡ 1-1 ಸಮಬಲ ಸಾಧಿಸಿತ್ತು.

ವಿರಾಮದ ನಂತರ ಬಾರ್ಸಿಲೋನಾ ನಿರ್ಣಾಯಕ ಎರಡನೇ ಗೋಲುಗಾಗಿ ಪ್ರಯತ್ನ ಮುಂದುವರಿಸಿತು. 86 ನಿಮಿಷದಲ್ಲಿ ಅನ್ಸು ಫಾತಿ ಗೋಲು ದಾಖಲಿಸಿದರು. ಇದು ಸಾಮಾನ್ಯ ಗೋಲು ಆಗಿರಲಿಲ್ಲ. ಅವರ ಹೊಸ ದಾಖಲೆ ಆಗಿತ್ತು. ಈ ಗೋಲು ನೆರವಿನಲ್ಲಿ ಬಾರ್ಸಿಲೋನಾ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News