ಧವನ್ ಬದಲಿಗೆ ಮಾಯಾಂಕ್‌ ಗೆ ತಂಡದಲ್ಲಿ ಸ್ಥಾನ

Update: 2019-12-11 18:26 GMT

ಮುಂಬೈ, ಡಿ.11: ಮುಂಬೈನಲ್ಲಿ ಡಿಸೆಂಬರ್ 15 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಶಿಖರ್ ಧವನ್ ಬದಲಿಗೆ ಮಾಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸಂದರ್ಭದಲ್ಲಿ ಮೊಣಕಾಲಿನ ಗಾಯದ ಹಿನ್ನೆಲೆಯಲ್ಲಿ 3 ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಧವನ್ ಅವರನ್ನು ಕೈ ಬಿಡಲಾಗಿತ್ತು.

ಟ್ವೆಂಟಿ-20 ಸರಣಿಯಲ್ಲಿ ಕೇರಳ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರನ್ನು ಶಿಖರ್ ಧವನ್ ಬದಲಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು.

 ಗಾಯದಿಂದಾಗಿ ಈ ವರ್ಷ ಧವನ್ ತಂಡದಲ್ಲಿ ಆಡಿದ್ದು ಕಡಿಮೆ. ಅವರು 2019ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಶತಕ ಬಾರಿಸುವ ವೇಳೆ ಧವನ್ ಹೆಬ್ಬೆರಳಿಗಾಯವಾಗಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಸಂವೇದನಾಶೀಲ ವರ್ಷವನ್ನು ಹೊಂದಿರುವ ಮಾಯಾಂಕ್ ಅಗರ್ವಾಲ್ ಅವರು ಈ ತಿಂಗಳು ಚೊಚ್ಚಲ ಏಕದಿನ ಕ್ಯಾಪ್ ಧರಿಸುವ ನಿರೀಕ್ಷೆಯಲ್ಲಿದ್ದಾರೆ. ವಿಜಯ್ ಶಂಕರ್ ಅವರ ಬದಲಿಯಾಗಿ ಅವರು ವಿಶ್ವಕಪ್ ತಂಡದ ಭಾಗವಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

76, 42 ಮತ್ತು 77 ಸ್ಕೋರ್‌ಗಳೊಂದಿಗೆ ಆಸ್ಟ್ರೇಲಿಯದಲ್ಲಿ ಟೆಸ್ಟ್ ವೃತ್ತಿಜೀವನಕ್ಕೆ ಕಾಲಿರಿಸಿದ ಅಗರ್ವಾಲ್ ಅವರು ವೆಸ್ಟ್ ಇಂಡೀಸ್‌ನಲ್ಲಿ ನಡೆದ 2-ಟೆಸ್ಟ್ ಸರಣಿಯಲ್ಲಿ ಕಳಪೆ ಸರಣಿಯನ್ನು ಹೊಂದಿದ್ದರು. ಆದರೆ ಭಾರತದ ತವರು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮಾಯಾಂಕ್ ಅಗರ್ವಾಲ್ ಎರಡು ದ್ವಿಶತಕ ಮತ್ತು ಶತಕ ಗಳಿಸಿದರು ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಆರಂಭಿಕ ಜೊತೆಯಾಟ ನೀಡಿದರು . ಇದರಿಂದಾಗಿ ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿತು. ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಆರಂಭಿಕ ಪಾಲುದಾರರಾಗಿ ಮಾಯಾಂಕ್ ಅಗರ್ವಾಲ್ ಅಥವಾ ಕೆಎಲ್. ರಾಹುಲ್ ಇವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News