ಕೆ.ಸಿ.ರೋಡ್ ಎಸ್‌ವೈಎಸ್ ಸೆಂಟರ್‌ ವತಿಯಿಂದ ಡಿ.15ರಂದು 5 ಜೋಡಿಗಳ ಸಾಮೂಹಿಕ ವಿವಾಹ

Update: 2019-12-12 09:33 GMT

ಮಂಗಳೂರು, ಡಿ.12: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ವೈಎಸ್ ಸೆಂಟರ್ ಕೆ.ಸಿ.ರೋಡ್ ಕಳೆದ ಎಂಟು ವರ್ಷಗಳ ಹಿಂದೆ ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಈ ವರ್ಷ 5 ಜೋಡಿ ಸಾಮೂಹಿಕ ವಿವಾಹವನ್ನು ನಡೆಸಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಎನ್.ಎಸ್. ಉಮರ್, ಡಿ.15ರಂದು ಕೋಟೆಕಾರ್ ನೂರ್ ಮಹಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾಂತ್ವಾನ ಎಂಬ ಹೆಸರಿನಲ್ಲಿ ನಡೆಸಲಾಗುವ ಈ ವಿವಾಹ ಕಾರ್ಯಕ್ರಮದಡಿ ವಧುವಿಗೆ 15 ಸಾವಿರ ನಗದು, 5 ಪವನ್‌ ಚಿನ್ನ ಹಾಗೂ ವರನಿಗೆ ಮದುವೆ ದಿನ 10 ಸಾವಿರ ನಗದು ಹಾಗೂ ವಾಚ್ ನೀಡಲಾಗುತ್ತದೆ. ವಿವಾಹಕ್ಕೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಹಾಗೂ ವಿವಾಹದ ಖರ್ಚು ವೆಚ್ಚಗಳನ್ನು ಕೂಡಾ ಸಂಸ್ಥೆ ಭರಿಸುತ್ತದೆ ಎಂದವರು ಹೇಳಿದರು.

ಕಳೆದ 7 ವರ್ಷಗಳಲ್ಲಿ 45 ಮದುವೆಗಳನ್ನು ನಡೆಸಿದ್ದು, ಒಂದು ಜೋಡಿಯ ಪತಿಯು ಅನಾರೋಗ್ಯದಿಂದ ಸಾವನ್ನಪ್ಪಿರುವುದನ್ನು ಹೊರತುಪಡಿಸಿ ಉಳಿದೆಲ್ಲಾ ಜೋಡಿಗಳು ಉತ್ತಮವಾಗಿ ಸಂಸಾರ ನಡೆಸುತ್ತಿವೆ. ಸಂಸ್ಥೆಯು ವಿವಾಹದ ಬಳಿಕವೂ ಜೋಡಿಗಳ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News