ಅಲ್ ಬಿರ್ರ್: ಕೊಟುಮಲ ಬಾಪು ಮುಸ್ಲಿಯಾರ್ ಸ್ಮಾರಕ ಪ್ರಶಸ್ತಿ ವಿತರಣೆ

Update: 2019-12-12 09:38 GMT

ಮಂಗಳೂರು: ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸುತ್ತಿರುವ ಅಲ್ ಬಿರ್ರ್ ಪ್ರಿ ಸ್ಕೂಲ್ ಸಂಸ್ಥೆಗಳ ಪೈಕಿ ಅತ್ಯುತ್ತಮ  ಸಂಸ್ಥೆಗಳಿಗೆ ಸಮಸ್ತ ಅಧ್ಯಕ್ಷರಾದ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು. 

ಕಲ್ಲಿಕೋಟೆಯ ಸಮಸ್ತ ಸಭಾಂಗಣದಲ್ಲಿ ನಡೆದ ಅಲ್ ಬಿರ್ರ್ ಮ್ಯಾನೇಜ್ಮೆಂಟ್ ಮೀಟ್ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸೈಯದ್ ಮುಹಮ್ಮದ್ ಕೋಯಾ ತಂಙಳ್ ಜಮಲುಲ್ಲೈಲಿ ಅಧ್ಯಕ್ಷತೆ ವಹಿಸಿದರು. ಮಲಪ್ಪುರಂ ಜಿಲ್ಲೆಯ ವೆಂಙರ ದಖಾವುಲ್ ಇಸ್ಲಾಂ ಅಲ್ ಬಿರ್ರ್ ಶಾಲೆಯನ್ನು ರಾಜ್ಯದ ಅತ್ಯುತ್ತಮ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಯಿತು.  

ಅತ್ಯುತ್ತಮ ಸೇವಾ ಪ್ರಶಸ್ತಿ: 2019-20ನೇ ಶೈಕ್ಷಣಿಕ ವರ್ಷದಲ್ಲಿ ಅಲ್ ಬಿರ್ರ್ ಗಾಗಿ ಅತ್ಯಧಿಕ ಸೇವೆಗೈದ್ದಕ್ಕಾಗಿ ಕರ್ನಾಟಕ ಅಲ್ ಬಿರ್ರ್ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಅವರಿಗೆ ಅಲ್ ಬಿರ್ರ್ ಚೇರ್ಮಾನ್ ಮುಹಮ್ಮದ್ ಕೋಯಾ ಜಮಲುಲೈಲಿ ತಂಙಳ್ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದರು.

ಕಳೆದ ವರ್ಷ ಫೆಸ್ಟ್ ಗಳಿಗೆ ಆತಿಥ್ಯ ನೀಡಿದ ಸಂಸ್ಥೆಗಳಿಗೆ ಜಿಫ್ರಿ ತಂಙಳ್ ಗೌರವ ಸಲ್ಲಿಸಿದರು. ಸಭೆಯಲ್ಲಿ ನೌಶಾದ್ ಬಾಖವಿ ಮುಖ್ಯ ಭಾಷಣ ಮಾಡಿದರು.  

ಎ.ವಿ ಅಬ್ದುರಹ್ಮಾನ್ ಮುಸ್ಲಿಯಾರ್, ಪಿನಂಗೋಡು ಅಬೂಬಕರ್, ಕೆ.ಮೊಯಿನ್ ಕುಟ್ಟಿ ಮಾಸ್ಟರ್, ಮುಸ್ತಫಾ ಮಾಸ್ಟರ್ ಮುಂಡಂಪಾರ, ನಾಸರ್ ಫೈಝಿ ಕೂಡತ್ತಾಯಿ, ಆರ್. ವಿ ಕುಟ್ಟಿ ಹಸನ್ ದಾರಿಮಿ, ಶಾಹುಲ್ ಹಮೀದ್ ಮಾಸ್ಟರ್ ಮೇಲ್ಮುರಿ, ಅಬ್ದುಲ್ ರಹೀಮ್ ಚುಯಲಿ, ಅಬ್ದುಲ್ ಸಲಾಮ್ ಹಾಜಿ ಸಲಾಲಾ, ಅಹ್ಮದ್ ಕೋಯಾ ಹಾಜಿ, ಫೈಸಲ್ ಪುಲ್ಲಾಲೂರ್ ಮತ್ತು ಇತರರು ಮಾತನಾಡಿದರು.

ಡಾ.ಕೆ.ವಿ.ಮುಹಮ್ಮದ್ ಅವರು ವಿಷಯ ಮಂಡನೆ ನಡೆಸಿದರು. ಈ ಬಾರಿಯ ಫೆಸ್ಟ್ ಕೇಂದ್ರಗಳನ್ನು ಘೋಷಿಸಲಾಯಿತು. ಸಾಂಸ್ಥಿಕ ವಿಷಯಗಳ ಚರ್ಚೆಯಲ್ಲಿ ಎ.ಡಿ.ಕೆ ಪಿ.ಮುಹಮ್ಮದ್, ಇಸ್ಮಾಯಿಲ್ ಮುಜದ್ದಿದಿ ಮತ್ತು ಫೈಸಲ್ ಹುದವಿ ಪರದಕ್ಕಾಡ್ ಮಾತನಾಡಿದರು. ಫೆಸ್ಟ್ ಆಯೋಜನೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಉಮರ್ ಮೌಲವಿ ವಯನಾಡ್ ಮತ್ತು ಕರ್ನಾಟಕದ ಅಕ್ಬರ್ ಆಲಿ ಅಡ್ಡೂರ್ ಅವರನ್ನು ಜಿಫ್ರಿ ತಂಙಳ್ ಹಾಗೂ ಜಮಾಲುಲ್ಲೈಲಿ ತಂಙಳ್ ಅಭಿನಂದಿಸಿದರು. ಉಮ್ಮರ್ ಫೈಜಿ ಮುಕ್ಕಮ್ ಸ್ವಾಗತಿಸಿ, ನೌಫಲ್ ವಾಫಿ ಮೆಲಾಟೂರ್ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News