ಪಡುಬಿದ್ರಿಯಲ್ಲಿ 'ಈದ್ ಮಿಲನ್-2019' ಕಾರ್ಯಕ್ರಮ

Update: 2019-12-12 11:56 GMT

ಪಡುಬಿದ್ರಿ: ಕರ್ನಾಟಕ ಮುಸ್ಲಿಮ್ ಜಮಾಅತ್ ಕಾಪು ತಾಲೂಕು ಸಮಿತಿಯ ವತಿಯಿಂದ ಬುಧವಾರ ಪಡುಬಿದ್ರಿಯ ಸಾಯಿ ಆರ್ಕೆಡ್‍ನಲ್ಲಿ ಮೀಲಾದ್ ಮಿಲನ್–2019 ಕಾರ್ಯಕ್ರಮ ನಡೆಯಿತು.

ಸಂದೇಶ ಭಾಷಣ ಮಾಡಿದ, ದಂಡ ತೀರ್ಥ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಲ್ಬನ್ ರೋಡ್ರಿಗಸ್, ಇಸ್ಲಾಂ ಧರ್ಮ ಪ್ರವಾದಿಯವರ ಮೂಲಕ ಜಗತ್ತಿಗೆ ಶಾಂತಿಯನ್ನು ಬೋಧಿಸಿದ್ದಾರೆ. ಪ್ರವಾದಿ ಮೂಲಕ ಅವತೀರ್ಣಗೊಂಡ ಕುರ್‍ಆನ್ ಮಾನವ ಕುಲಕ್ಕೆ ಉತ್ತಮ ಸಂದೇವನ್ನು ನೀಡಿದೆ. ಪ್ರತಿಯೋರ್ವರು ಕುರ್‍ಆನ್ ಅರಿತುಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳವ ಬೇಕಾಗಿದೆ ಎಂದರು. 

ಚಿಂತಕರಾದ ಅಬ್ದುಲ್ ಹಮೀದ್ ಬಜ್ಪೆ ಮಾತನಾಡಿ, ಇಸ್ಲಾಂ ಧರ್ಮ ಶಾಂತಿ ಮತ್ತು ಸೌಹಾರ್ದತೆಗೆ ಒತ್ತು ನೀಡಿದೆ. ಕೆಲವೊಂದು ದುಷ್ಕರ್ಮಿಗಳು ನಡೆಸುವ ಭಯೋತ್ಪಾದನೆಗೂ ಇಸ್ಲಾಂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನುಡಿದ ಅವರು, ಇಂದು ಧರ್ಮ ಧರ್ಮಗಳ ನಡುವೆ ನಡೆಯುವ ಗಲಭೆಗೆ  ಕೊನೆಯಾಗಿಸಬೇಕಾದ ಅನಿವಾರ್ಯತೆ ಇದೆ. ಈ ಮೂಲಕ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದರು. 

ತುಳು ಸಾಹಿತಿ ದಯಾನಂದ ಕೆ. ಶೆಟ್ಟಿ ಮಾತನಾಡಿ, ಎಲ್ಲಾ ಧರ್ಮೀಯರು ಇಂತಹ ಕಾರ್ಯಕ್ರಮಗಳು ನಡೆಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಬೇಕಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು. 

ಕಾಪು ತಾಲೂಕು ಮುಸ್ಲಿಮ್ ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಅದ್ದು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸದಸ್ಯ ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಮುನ್ನುಡಿ ಭಾಷಣ ಮಾಡಿದರು. ಈಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ. ಬಶೀರ್ ಆಲಿ ಉಪಸ್ಥಿತರಿದ್ದರು. 

ಎಸ್‍ಎಮ್ ಎ ರಾಜ್ಯ ಉಪಾಧ್ಯಕ್ಷ ಹಾಜಿ ಮೊಯಿದಿನ್ ಗುಡ್ವಿಲ್, ಜಿಲ್ಲಾ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಮನ್ಸೂರ್ ಮೆಕ್ಕಾಸ್. ಜಿಲ್ಲಾ ದಫ್ ಅಸೋಸಿಯೇಷನ್ ಅಧ್ಯಕ್ಷ ಅಬ್ಬು ಹಾಜಿ ಮೂಳೂರು ಎಸ್‍ವೈಎಸ್ ಸೆಂಟರ್ ಕಾರ್ಯದರ್ಶಿ ಹೈದರ್ ಅಹ್ಸನಿ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಮುಸ್ಲಿಂ ಜಮಾಅತ್ ತಾಲೂಕು ಉಪಾಧ್ಯಕ್ಷ ಎಮ್ ಕೆ ಅಬ್ದುರ್ರಶೀದ್ ಸಖಾಫಿ ಸ್ವಾಗತಿಸಿದರು ಬಶೀರ್ ಉಸ್ತಾದ್ ಸೌಹಾರ್ದ ಹಾಡು ಹಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News