ಕೇಬಲ್‌ಟಿವಿ ಕಾರ್ಯಕ್ರಮ ಕುರಿತ ದೂರು: ಸಹಾಯವಾಣಿ ಆರಂಭ

Update: 2019-12-12 13:43 GMT

ಮಂಗಳೂರು, ಡಿ.12: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೇಬಲ್ ಟಿವಿ ಮತ್ತು ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರು ಸಲ್ಲಿಸಲು 24x7 ಸಾರ್ವಜನಿಕ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ.

ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮ ಸಭ್ಯತೆಯ ವಿರುದ್ಧ, ಧರ್ಮ, ಸಮುದಾಯ-ಧಾರ್ಮಿಕ ಸಮೂಹ ನಿಂದಿಸುವ ಮಾತು, ದೃಶ್ಯ ಅಥವಾ ಕೋಮುವಾದಿ ಭಾವನೆ ಉತ್ತೇಜಿಸುವುದು. ಅಸಹ್ಯಕರ, ಮಾನನಷ್ಟ ಮಾಡುವಂತ ಉದ್ದೇಶಪೂರ್ವಕ, ಸುಳ್ಳು, ಸೂಚನಾತ್ಮಕ ವ್ಯಂಗ್ಯೋಕ್ತಿ, ಅರ್ಧ ಸತ್ಯ, ಹಿಂಸೆ ಪ್ರಚೋದಿಸುವ, ಕಾನೂನು-ಶಿಸ್ತುಪಾಲನೆ ಕೆಣಕುವುದು, ರಾಷ್ಟ್ರ ವಿರೋಧಿ ಭಾವನೆ ಉತ್ತೇಜಿಸುವುದು ಅಥವಾ ನ್ಯಾಯಾಲಯ ನಿಂದನೆಗೆ ಕಾರಣವಾಗುವಂತಹ ಅಂಶಗಳು ಕಂಡುಬಂದರೆ ನಾಗರಿಕರು ಅದರ ವಿರುದ್ಧ ಸಹಾಯವಾಣಿಗೆ ದೂರು ಸಲ್ಲಿಸಬಹುದು.

ಕಾಯ್ದೆಯ ಪರಿಚ್ಛೇದ 7ರಂತೆ ಜಾಹೀರಾತು ಸಂಹಿತೆಗೆ ಸಂಬಂಧಿಸಿದಂತೆ ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಜಾಹೀರಾತು ದೇಶದ ಕಾನೂನಿಗೆ ಪೂರಕವಾಗಿರಬೇಕು. ಚಂದಾದಾರರ ನೈತಿಕತೆ, ಸಭ್ಯತೆ, ಧಾರ್ಮಿಕ ಭಾವನೆಗೆ ಕುಂದುಂಟು ಮಾಡಬಾರದು. ಯಾವುದೇ ಮತ, ಜಾತಿ, ವರ್ಣ, ಕೋಮು ಮತ್ತು ರಾಷ್ಟ್ರೀಯತೆಯನ್ನು ಅವಹೇಳನ ಮಾಡಬಾರದು.

ಸಂವಿಧಾನದ ಯಾವುದೇ ಉಪಬಂಧದ ವಿರುದ್ಧ ಇರಬಾರದು. ಜನರನ್ನು ಅಪರಾಧಕ್ಕೆ ಪ್ರಚೋದಿಸುವುದಾಗಲಿ, ಅಶಾಂತಿ ಅಥವಾ ಹಿಂಸೆಗೆ ಯಾವುದೇ ರೀತಿಯ ಅಶ್ಲೀಲತೆಗೆ ಕಾರಣವಾಗುವುದಕ್ಕೆ ಅವಕಾಶ ಉಂಟಾಗಬಾರದು. ಅಪರಾಧೀಕರಣ ಬಯಸುವಂತೆ ಬಿಂಬಿಸಿಬಾರದು ಹಾಗೂ ರಾಷ್ಟ್ರೀಯ ಲಾಂಛನ, ಸಂವಿಧಾನದ ಯಾವುದೇ ಭಾಗ ಅಥವಾ ವ್ಯಕ್ತಿ, ರಾಷ್ಟ್ರೀಯ ನಾಯಕರ ವ್ಯಕ್ತಿತ್ವ ಅಥವಾ ರಾಷ್ಟ್ರದ ಗಣ್ಯರ ಶೋಷಣೆಯಾಗಬಾರದು. ಇವುಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದೂರು ಸಲ್ಲಿಸಬಹುದು. ದೂರನ್ನು ಸಂಬಂಧಿಸಿದ ಜಿಲ್ಲಾ ನಿರ್ವಹಣಾ ಸಮಿತಿಗೆ/ ರಾಜ್ಯ ನಿರ್ವಹಣಾ ಸಮಿತಿಗೆ ಸೂಕ್ತ ಕ್ರಮಕ್ಕಾಗಿ ವರ್ಗಾಯಿಸಲಾಗುವುದು.

ಸಾರ್ವಜನಿಕರು ನಿರ್ಭೀತಿಯಿಂದ ದೂರು, ಆಕ್ಷೇಪಗಳನ್ನು ಸಹಾಯವಾಣಿ ದೂ.ಸಂ.: 080-22028013, 9480841212 ಅಥವಾ complaintsontelevision@gmail.comಗೆ ಸಲ್ಲಿಸುವಂತೆ ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News