ಸಾಲಿಗ್ರಾಮ: ಅಂಗೀಕಾರ ಆಂದೋಲನ ಸಮಾರೋಪ

Update: 2019-12-12 14:06 GMT

ಸಾಲಿಗ್ರಾಮ, ಡಿ.12: ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನೀರು, ಭೂಮಿ, ಪರಿಶುದ್ಧ ಗಾಳಿ ಹಾಗೂ ಮಾನವನ ಆಯಸ್ಸಿಗೆ ಸಂಚಕಾರ ತಂದಿದೆ. ಪ್ರಕೃತಿಯ ಮುಂದೆ ಕೃತಕವಾಗಿರುವುದೆಲ್ಲ ಶೂನ್ಯ. ಶುದ್ಧ ಪರಿಸರ ನಮಗೆ ಹಿಂದಿನ ತಲೆಮಾರಿನಿಂದ ಬಂದಿದ್ದು, ಅದನ್ನು ಯುಕ್ತಕಂಡ ರೀತಿಯಲ್ಲಿ ಅನುಭವಿಸಿ, ಮುಂದಿನ ತಲೆಮಾರಿಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅತಿ ಅಗತ್ಯ ಎಂದು ಹಿರಿಯ ನಾಗರಿಕ ಪಿ.ಗೋಪಾಲ ಉಪಾಧ್ಯ ಹೇಳಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಇತ್ತೀಚೆಗೆ ನಡೆದ ಅಂಗೀಕಾರ ಆಂದೋಲನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣ್ ಬಿ., ನಿವೃತ್ತ ಮುಖ್ಯೋ ಪಾಧ್ಯಾಯ ನಾಗೇಶ್ ಮಯ್ಯ, ನಿವೃತ್ತ ಅಧ್ಯಾಪಕ ಕೆ.ನರಸಿಂಹ ಮಧ್ಯಸ್ಥ ಮಾತನಾಡಿದರು. ಪಿ.ಗೋಪಾಲ ಉಪಾಧ್ಯರನ್ನು ಸನ್ಮಾನಿಸಲಾಯಿತು. ಸದಸ್ಯ ರಾದ ಸಂಜೀವ ದೇವಾಡಿಗ, ಸುಲತಾ ಹೆಗ್ಡೆ, ರವೀಂದ್ರ ಕಾಮತ್, ಗಣೇಶ್ ಉಪಸ್ಥಿತರಿದ್ದರು. ಸಿಬ್ಬಂದಿ ಕೆ.ಚಂದ್ರಶೇಖರ ಸೋಮಯಾಜಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ, ಆಶು ಭಾಷಣ, ಪಿಕ್ ಆ್ಯಕ್ಟ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಚಿತ್ರಪಾಡಿ ಶಾಲೆ-ಸಾಲಿಗ್ರಾಮ, ಕಾರ್ಕಡ ಶಾಲೆ-ಸಾಲಿಗ್ರಾಮ, ತೋಡಕಟ್ಟು ಶಾಲೆ, ಪಾರಂಪಳ್ಳಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಸತಿ ಯೋಜನೆಯ ಫಲಾನುಭವಿಗಳಿಗೆ ಕರಾವಳಿಯ ಸೊಗಡಾದ ಮಡಿ ಹೆಣೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News