ಸುಳ್ಯ: ಹೊಸ ಸೇತುವೆ ನಿರ್ಮಾಣ; ರಸ್ತೆ ಸಂಚಾರದಲ್ಲಿ ಬದಲಾವಣೆ

Update: 2019-12-12 17:12 GMT

ಮಂಗಳೂರು, ಡಿ.12: ಸುಳ್ಯ ತಾಲೂಕಿನ ಅಲೆಟ್ಟಿ, ಕೊಲ್ಚಾರು, ಕಣಕ್ಕೂರು, ಬಂದ್ಯಡ್ಕ ರಸ್ತೆಯಲ್ಲಿ ಹಳೆಯ ಸೇತುವೆ ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದ್ದು, ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಹಾಲಿ ಸೇತುವೆಯ ಎರಡೂ ಬದಿ ತೆಂಗು ಅಡಿಕೆ ತೋಟವಿದ್ದು, ಬದಲಿ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸಲು ಡಿ.18 ರಿಂದ 31ರವರೆಗೆ ಈ ಭಾಗದ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಯಶವಂತ ಕುಮಾರ್ ಆದೇಶಿದ್ದಾರೆ.

ಬದಲಿ ಸಂಚರಿಸುವ ಮಾರ್ಗ: ಬಂದ್ಯಡ್ಕ ಮಾರ್ಗದಿಂದ ಸುಳ್ಯಕ್ಕೆ ಸಂಚರಿಸುವ ವಾಹನಗಳು ಕೊಲ್ಲರಮೂಲೆ, ಕರ್ಲಪ್ಪಾಡಿ ದ್ವಾರ, ಕಾಂತಮಂಗಲ ಸೇತುವೆ ಮೂಲಕ ಹಾಗೂ ಸುಳ್ಯ ಮಾರ್ಗದಿಂದ ಬಂದ್ಯಡ್ಕಕ್ಕೆ ಸಂಚರಿಸುವ ವಾಹನಗಳು ಕಾಂತಮಂಗಲ ಸೇತುವೆ, ಕರ್ಲಪ್ಪಾಡಿ ದ್ವಾರ, ಕೊಲ್ಲರಮೂಲೆ ಮೂಲಕ ಬಂದ್ಯಡ್ಕಕ್ಕೆ ಸಂಚರಿಸಲು ಬದಲಿ ಮಾರ್ಗವನ್ನಾಗಿ ಉಪಯೋಗಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News