ಮಂಗಳೂರು ವಿ.ವಿ. 38ನೇ ವಾರ್ಷಿಕ ಘಟಿಕೋತ್ಸವ: ಪದವಿ ಪಡೆಯಲು ಅರ್ಜಿ ಆಹ್ವಾನ

Update: 2019-12-12 17:15 GMT

ಮಂಗಳೂರು, ಡಿ.12: ಮಂಗಳೂರು ವಿಶ್ವ ವಿದ್ಯಾನಿಲಯದ 38ನೇ ವಾರ್ಷಿಕ ಘಟಿಕೋತ್ಸವವು 2020ನೇ ಜನವರಿ ತಿಂಗಳಿನಲ್ಲಿ ಏರ್ಪಡಿಸಲು ಉದ್ದೇಶಿಸಿದೆ. ಮಂಗಳೂರು ವಿ.ವಿ.ಯ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಂದ ಘಟಿಕೋತ್ಸವದಂದು ಪದವಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲ ಸ್ನಾತ್ತಕೋತ್ತರ ಪದವಿ, ಡಾಕ್ಟರೇಟ್ ಪದವಿ, ಸ್ನಾತ್ತಕೋತ್ತರ ಮತ್ತು ಪದವಿ ಮಟ್ಟದಲ್ಲಿ ಪದಕ/ಬಹುಮಾನ, ಪದವಿ ಮಟ್ಟದ ಎಲ್ಲ ನಿಕಾಯಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡವರು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ವರ್ಗ ಶುಲ್ಕ ವಿವರ: ಪದವಿ ಮಟ್ಟ- 880 ರೂ., ಸ್ನಾತ್ತಕೋತ್ತರ ಪದವಿ- 1,110 ರೂ., ಪಿಎಚ್‌ಡಿ/ಎಂ.ಫಿಲ್- 2,160 ರೂ., ಡಿ.ಎಸ್ಸಿ/ಡಿ.ಲಿಟ್- 3,310 ರೂ.

ಎಸ್ಸಿಎಸ್ಟಿ ಶುಲ್ಕ ವಿವರ: ಪದವಿ ಮಟ್ಟ- 500 ರೂ., ಸ್ನಾತಕೋತ್ತರ ಪದವಿ- 615ರೂ., ಪಿಎಚ್‌ಡಿ/ಎಂ.ಫಿಲ್- 1,140 ರೂ., ಡಿ.ಎಸ್ಸಿ/ಡಿ.ಲಿಟ್- 1.715 ರೂ.

ಶುಲ್ಕವನ್ನು ರಾಷ್ಟ್ರೀಕೃತ ಬ್ಯಾಂಕ್‌ನ ಶಾಖೆಗಳ ಮುಖಾಂತರ ವಿಶ್ವವಿದ್ಯಾನಿಲಯದ ನಿಧಿಗೆ ಜಮೆಯಾಗುವಂತೆ ಡಿ.ಡಿ/ಚಲನ್ ಮೂಲಕ ಪಾವತಿಸಬಹುದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ದೃಢೀಕರಿಸಿದ ಜಾತಿ ಪ್ರಮಾಣಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಬೇಕು. ಪಿಎಚ್‌ಡಿ/ ಡಿ.ಎಸ್ಸಿ/ಡಿ.ಲಿಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು ಅರ್ಜಿಯೊಂದಿಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು.

ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ 2020ನೇ ಜ.5ರೊಳಗೆ ಕಳುಹಿಸಿಕೊಡಬೇಕು ಎಂದು ಮಂಗಳೂರು ವಿವಿಯ ಕುಲಸಚಿವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News