ಮೂಡುಬಿದಿರೆ: 'ಫಾರ್ಮ್ ಟ್ರೈನಿಂಗ್ ಮತ್ತು ಲರ್ನಿಂಗ್ ' ಕಾರ್ಯಕ್ರಮ

Update: 2019-12-12 17:34 GMT

ಮೂಡುಬಿದಿರೆ: ಇಂದಿನ ಯುವ ಜನತೆ ತಮ್ಮ ಸ್ವಂತ ಭೂಮಿಯಲ್ಲಿ ವ್ಯವಸಾಯ ಮಾಡುವುದನ್ನು ಬಿಟ್ಟು, ಇನ್ನೊಬ್ಬರ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ ಅವರ  ಗುಲಾಮರಾಗುತ್ತಿರುವುದು ಖೇದಕರ ಎಂದು ಹವ್ಯಾಸಿ ಪತ್ರಕರ್ತ ವಿಶ್ವಾಸ್ ಭಾರಧ್ವಾಜ್ ಹೇಳಿದರು.

ಅರುಣ್ಯ ಫೌಂಡೇಶನ್ ಮಂಗಳೂರು ಹಾಗೂ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ಪದವಿ ಕಾಲೇಜಿನ ಕಾಮರ್ಸ್-ಪ್ರೊಫೆಶನಲ್ ವಿಭಾಗದ ಒಡಂಬಡಿಕೆಯ ನೆಲೆಯಲ್ಲಿ  ಬಾರಾಡಿ ಬೀಡಿನ ಶೃಂಗ-ಶ್ಯಾಮಾಲದಲ್ಲಿ ಆಯೋಜನೆಗೊಂಡಿದ್ದ "ಫಾರ್ಮ್ ಟ್ರೈನಿಂಗ್ ಮತ್ತು ಲರ್ನಿಂಗ್" ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಕೃಷಿಯನ್ನೇ ನಂಬಿ ಅದರಲ್ಲೇ ಬಂಡವಾಳ ತೊಡಗಿಸಿ ದುಪ್ಪಟ್ಟು ಹಣ ಮಾಡಿದ ರೈತರ ಬಗ್ಗೆ ಇಂದಿನ ಯುವ ಸಮುದಾಯಕ್ಕೆ ಅರಿವಿಲ್ಲ. ರೈತರ ಮಕ್ಕಳು ರೈತನಾಗಲು ಬಯಸುತ್ತಿಲ್ಲ, ಇದು ನಮ್ಮ ಯುವಪೀಳಿಗೆಯ ದುರಂತ ಎಂದು ತಿಳಿಸಿದರು. 

ಫಾರ್ಮ್‍ನಲ್ಲಿರುವ ಇಂಗು ಗುಂಡಿ, ಗೋಬರ್ ಗ್ಯಾಸ್, ದೇಶೀ ತಳಿಯ ಜಾನುವಾರುಗಳು, ವಿದೇಶಿ ಬೆಳೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.

ಕೃಷಿ ತರಬೇತಿಯ ಅಂಗವಾಗಿ ಕಲಿಕೆಯ ಹೊಸ ಮಾದರಿಯನ್ನಿಟ್ಟುಕೊಂಡು ಗುಂಪು ಚರ್ಚೆ ನಡೆಸಲಾಯಿತು. ರೈತರಿಂದ ನೇರ ಮಾರುಕಟ್ಟೆಗೆ, ಟೆರೇಸ್ ಫಾಮಿರ್ಂಗ್, ಕೃಷಿಯಲ್ಲಿನ ಪುನರ್ಬಳಕೆ, ವಿದ್ಯಾರ್ಥಿಗಳಿಂದ ರೈತರೆಡೆಗೆ, ವಿದ್ಯಾರ್ಥಿಗಳ ಸ್ವ-ಸಹಾಯ ಸಂಘ, ಮತ್ತು ರೈತರಿಂದ ಮುಂದಿನ ಜನಾಂಗಕ್ಕೆ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.  ಕಾಮರ್ಸ್-ಪ್ರೊಫೆಶನಲ್ ವಿಭಾಗದ 18 ವಿದ್ಯಾರ್ಥಿಗಳು ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಅರುಣ್ಯ ಫೌಂಡೇಶನ್‍ನ ಅಧ್ಯಕ್ಷ ವಿಕ್ರಮ್ ಕೆ,  ವಿಭಾಗದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ, ಕಾಮರ್ಸ್-ಪ್ರೊಫೆಶನಲ್ ವಿಭಾಗದ ಸಂಯೋಜಕ ಅಶೋಕ ಕೆ.ಜಿ, ಉಪನ್ಯಾಸಕಿ ಶಿಲ್ಪಾ ಭಟ್ ಎನ್ ಎಚ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News