ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಉಡುಪಿ ಜಿಲ್ಲಾದ್ಯಂತ ವಿವಿಧ ಮಸೀದಿಗಳಲ್ಲಿ ಪ್ರತಿಭಟನೆ

Update: 2019-12-19 06:19 GMT

ಉಡುಪಿ, ಡಿ.12: ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹಾಗೂ ಜಾತ್ಯತೀತ ಹಂದರವನ್ನು ನಾಶ ಮಾಡಿ ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝಿನ ಬಳಿಕ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು.

ಉಡುಪಿ ಜಾಮಿಯ ಮಸೀದಿಯಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಈ ಮಸೂದೆಯ ಮೂಲಕ ದೇಶದಲ್ಲಿ ಸಾವಿರಾರು ವರ್ಷಗಳಿಂದ ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬದುಕುತ್ತಿರುವ ವಿವಿಧ ಸಮುದಾಯಗಳ ಮಧ್ಯೆ ದ್ವೇಷ, ಅಪನಂಬಿಕೆಯ ವಾತಾವರಣ ನಿರ್ಮಿಸಿ, ಜನರನ್ನು ವಿಭಜಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ದೇಶದಲ್ಲಿ ಹುಟ್ಟಿ ತಮ್ಮ ಸರ್ವಸ್ವವನ್ನು ಈ ದೇಶಕ್ಕೆ ಮುಡುಪಾಗಿಟ್ಟ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿರುವ ಈ ದೇಶದ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಆರೆಸ್ಸೆಸ್, ಸಂಘಪರಿವಾರದ ಯೋಜನೆ ಭಾಗ ಈ ಮಸೂದೆಯಾಗಿದೆ. ಕೇಂದ್ರ ಸರಕಾರ ಈ ಮಸೂದೆಯನ್ನು ವಾಪಾಸ್ಸು ಪಡೆದುಕೊಳ್ಳುವವರೆಗೆ ಬೇರೆ ಬೇರೆ ಹಂತದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಮೌಲಾನ ರಶೀದ್ ಅಹ್ಮದ್ ನದ್ವಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಮಸೀದಿಯ ಅಧ್ಯಕ್ಷ ಯಾಸೀನ್ ಸೈಯದ್, ಹುಸೈನ್ ಕೋಡಿಬೆಂಗ್ರೆ, ಸಲಾವುದ್ದೀನ್ ಅಬ್ದುಲ್ಲಾ, ಮಸೀದಿ ಸದಸ್ಯ ಖಾಲಿದ್, ಜಅಮಾತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾನೀಯ ಕಾರ್ಯದರ್ಶಿ ನಿಸಾರ್ ಉಪ್ಪಿನಕೋಟೆ, ಎಸ್‌ಐಓ ರಾಜ್ಯ ಪ್ರಮುಖ ಯಾಸೀನ್ ಕೋಡಿಬೆಂಗ್ರೆ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ನೇಜಾರು ಜಾಮೀಯ ಮಸೀದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಅಬೂಬಕರ್ ನೇಜಾರು, ಖತೀಬ್ ಉಸ್ಮಾನ್ ಮದನಿ, ಉಪಾಧ್ಯಕ್ಷ ಖಾಸೀಂ ನೇಜಾರು, ಕಾರ್ಯದರ್ಶಿ ಇದಿನಬ್ಬ ಸಾಹೇಬ್, ನೌಫಲ್ ಮದನಿ ನೇಜಾರು, ಶಮೀರ್ ಮಿಸ್ಬಾಹಿ ನೇಜಾರು ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಉಡುಪಿ ನಾಯರ್‌ಕೆರೆ ಹಾಶಿಮಿ ಜುಮಾ ಮಸೀದಿಯಲ್ಲಿ ನಡೆದ ಮಸೂದೆ ವಿರುದ್ದ ಪ್ರತಿಭಟನೆಯನ್ನುದ್ದೇಶಿಸಿ ವೌಲಾನ ಹಾಶಿಮಿ ಉಮ್ರಿ ಮಾತನಾಡಿದರು. ಆತ್ರಾಡಿ ಮುಹಿಯ್ಯುದ್ದೀನ್ ಜುಮಾ ಮಸೀದಿ ಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಸುಲೇಮಾನ್ ಅಲ್ ಖಾಸಿಮಿ, ಖತೀಬ್ ಉಮ್ಮರ್ ಮದನಿಮೊದಲಾದವರು ಉಪಸ್ಥಿತರಿದ್ದರು.

ಆತ್ರಾಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಸುಲೈಮಾನ್ ಅಲ್‌ ಖಾಸಿಮಿ, ಖತೀಬ್ ಉಮರ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಉಡುಪಿ ಅಂಜುಮಾನ್ ಜುಮಾ ಮಸೀದಿ, ಹೂಡೆ ಕದೀಮ್ ಜಾಮೀಯ ಮಸೀದಿ, ಹೂಡೆ ಜದೀದ್ ಜಾಮಿಯ ಮಸೀದಿ, ಗುಜ್ಜರಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ, ಮಲ್ಪೆ ಜಾಮಿಯ ಮಸೀದಿ, ಮಲ್ಪೆ ಮದೀನಾ ಜಾಮಿಯ ಮಸೀದಿ, ನೇಜಾರು ಉಮ್ಮೆ ಆಯಿಷಾ ಜಾಮೀಯ ಮಸೀದಿ, ದೊಡ್ಡಣಗುಡ್ಡೆ ಜುಮಾ ಮಸೀದಿ, ಆದಿಉಡುಪಿ ಜಾಮಿಯ ಮಸೀದಿ, ಉಡುಪಿ ಶಾಂತಿನಗರ ಮದೀನ ಮಸೀದಿ, ಬ್ರಹ್ಮಾವರ ರಂಗನಕೆರೆ ಜುಮಾ ಮಸೀದಿ, ಕುಂಜಾಲು ನೂರು ಜಾಮಿಯ ಮಸೀದಿಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕುಂದಾಪುರ: ಗಂಗೊಳ್ಳಿಯ ಕೇಂದ್ರ ಜುಮಾ ಮಸೀದಿ, ಹಾಗೂ ಗಂಗೊಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಜುಮಾ ನಮಾಝ್‌ ನ ಬಳಿಕ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭ ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ಪಿ.ಎಂ.ಹಸೈನಾರ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

ನಾವುಂದ -ಮರವಂತೆ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿ ಅಧ್ಯಕ್ಷ ಹಾಜಿ ತೌಫಿಕ್ ಅಬ್ದುಲ್ಲಾ, ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಕಾರ್ಯದರ್ಶಿ ಸತ್ತಾರ್, ಖಜಾಂಚಿ ಕೆ.ಪಿ.ಹುಸೈನ್ ಹಾಜಿ, ಬಿ.ಎ.ಕೆ.ಸೈಯದ್, ವಕೀಲರಾದ ಇಲ್ಯಾಸ್, ಅಬ್ದುಲ್ ಹಮೀದ್, ಮಾಣಿಕೊಲ್ ಅಬ್ಬಾಸ್, ಇರ್ಷಾದ್ ಕೋಯ ನಗರ, ಎನ್.ಸಿ.ಮೊಯ್ದಿನ್, ಬಿ.ಎಚ್.ಮೊಯ್ದಿನ್, ಸುಲೈಮಾನ್, ಇಮಾಮ್ ಅಬ್ದುಲ್ಲತೀಫ್ ಫಾಳಿಲಿ ಮೊದಲಾದವರು ಹಾಜರಿದ್ದರು.

ಎಂ ಕೋಡಿ ಬಿಲಾಲ್ ಜುಮಾ ಮಸೀದಿ, ಕೋಟೇಶ್ವರ ಸುಲ್ತಾನ್ ಜುಮಾ ಮಸೀದಿ, ಹೆಮ್ಮಾಡಿ ರಹ್ಮಾನಿ ಜುಮಾ ಮಸೀದಿ, ಮೂಡುಗೋಪಾಡಿ ರಿಫಾಯಿ ಜುಮ್ಮಾ ಮಸೀದಿ, ಕುಂದಾಪುರ ಕೋಡಿ ಮುಹಿಯುದ್ದೀನ್ ಜುಮಾ ಮಸೀದಿ, ಹಂಗ್ಳೂರು ಜುಮಾ ಮಸೀದಿ, ಗುಲ್ವಾಡಿ ಮೆಹರಾಜ್ ಜುಮಾ ಮಸೀದಿಗಳಲ್ಲಿ ಪ್ರತಿಭಟನೆ ನಡೆಸಿ ಮಸೂದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಕಾಪು: ಕೇಂದ್ರ ಸರಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕೊಂಬಗುಡ್ಡೆಯ ಜದೀದ್ ಕಲಾನ್ ಜಾಮಿಯಾ ಮಸ್ಜೀದ್‌ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಮಸೀದಿಯ ಅಧ್ಯಕ್ಷ ಶಬೀಹ್ ಅಹ್ಮದ್ ಕಾಜಿ, ಪ್ರಧಾನ ಕಾರ್ಯದರ್ಶಿ ಅನ್ವರ್ ಅಲಿ, ಮೌಲಾನಾ ಮುಹಮ್ಮದ್ ಫರ್ವೇಝ್ ಆಲಮ್, ಮುಹಮ್ಮದ್ ಇಕ್ಬಾಲ್ ಸಾಬ್, ಶಂಸುದ್ದೀನ್, ಆಸಿಫ್ ಬಿ., ಹಾಶಿಮ್ ಸಾಹೇಬ್, ಇಬ್ರಾಹೀಂ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಕಳ: ಕೇಂದ್ರ ಸರಕಾರ ಜಾರಿಗೆ ತಂದ ಪೌರತ್ವ ತಿದ್ದುಪತಿ ಮಸೂದೆ-2019 ವಿರೋಧಿಸಿ ಕಾರ್ಕಳ ನಗರದ ಸಾಲ್ಮರ್ ಜಾಮೀಯಾ ಮಸೀದಿಯ ಹೊರಾಂಗಣದಲ್ಲಿ ಕಾರ್ಕಳ ತಾಲೂಕು ವಿವಿಧ ಮುಸ್ಲಿಂ ಒಕ್ಕೂಟಗಳ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಯಿತು.

ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಮೂಲಕ ಆರೆಸ್ಸೆಸ್‌ನ ರಹಸ್ಯ ಅಂಜೆಂಡಾವನ್ನು ಕೇಂದ್ರ ಬಿಜೆಪಿ ಸರಕಾರ ಜಾರಿಗೊಳಿಸುತ್ತಿದೆ. ಸಂವಿಧಾನ ವಿರೋಧಿಯಾಗಿರುವ ಈ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕಾರ್ಕಳ ಮುಸ್ಲಿಂ ಜಮಾಅತ್‌ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಒತ್ತಾಯಿಸಿದ್ದಾರೆ.

ಕಾರ್ಕಳ ಜಾಮಿಯ ಮಸೀದಿಯ ಇಮಾಮ್ ಮೌಲನಾ ಝಹೀರ್ ಅಹ್ಮದ್ ಅಲ್ ಖಾಸಿಂ, ಜಿಲ್ಲಾ ವಕ್ಫ್ ಸಮಿತಿಯ ಸದಸ್ಯ ಮೌಲನಾ ಆಝೀಝುದ್ದೀನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಗೌಸ್, ಹಯಾತುಲ್ ಇಸ್ಲಾಂ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಗೌಸ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾರ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ಸೈಯದ್ ಹಸನ್ ಮತ್ತಿತರರು ನೇತೃತ್ವ ವಹಿಸಿದರು.

ಕಾಪು: ಕೇಂದ್ರ ಸರಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕೊಂಬಗುಡ್ಡೆಯ ಜದೀದ್ ಕಲಾನ್ ಜಾಮಿಯಾ ಮಸ್ಜೀದ್‌ ನಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು.

ಮಸೀದಿಯ ಅಧ್ಯಕ್ಷ ಶಬಿಹ್ ಅಹಮದ್ ಕಾಜಿ, ಪ್ರಧಾನ ಕಾರ್ಯದರ್ಶಿ ಅನ್ವರ್ ಅಲಿ, ಮೌಲಾನಾ ಮುಹಮ್ಮದ್ ಫರ್ವೇಝ್ ಆಲಮ್, ಮುಹಮ್ಮದ್ ಇಕ್ಬಾಲ್ ಸಾಬ್, ಶಂಸುದ್ದೀನ್, ಆಸಿಫ್ ಬಿ., ಹಾಶಿಮ್ ಸಾಹೇಬ್, ಇಬ್ರಾಹೀಂ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

ಮಲ್ಲಾರು ಪಕೀರ್ಣಕಟ್ಟೆಯ ಮುಹಿಯುದ್ದೀನ್ ಜುಮಾ ಮಸೀದಿ, ಕಾಪು ಕೊಪ್ಪಲಂಗಡಿ ಖಾದಿಮ್ ಜಾಮಿಯ ಮಸೀದಿ, ಕೊಂಬಗುಡ್ಡೆ ಗೌಸಿಯಾ ಜಾಮಿಯ ಮಸೀದಿ, ಮಲ್ಲಾರ್ ಅಹ್ಮದಿ ಮೊಹಲ್ಲಾ ಜಾಮಿಯ ಮಸೀದಿ, ಕೊಂಬಗುಡ್ಡೆ ಕಲಾನ್ ಮಸೀದಿಗಳಲ್ಲಿ ಪ್ರತಿಭಟನೆ ನಡೆಸಿ ಪೌರತ್ವ ತಿದ್ದುಪಡಿ ಮಸೂದೆ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News