ಜೆಮ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕಕ್ರೀಡಾಕೂಟ

Update: 2019-12-13 11:12 GMT

ಬಂಟ್ವಾಳ, ಡಿ. 13: ಗೊಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕಕ್ರೀಡಾಕೂಟ ನಡೆಯಿತು. ಬಂಟ್ವಾಳ  ಲಯನ್ಸ್‍ಕ್ಲಬ್ ಅಧ್ಯಕ್ಷ ಶ್ರೀನಿವಾಸಪೂಜಾರಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಆಡಳಿತ ಟ್ರಸ್ಟಿ ಮುಹಮ್ಮದ್ ಹನೀಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಮನಾಥ ರೈ ಮೆರಾವು, ಟ್ರಸ್ಟಿ ಅಹ್ಮದ್ ಮಸ್ತಫಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಮೀದಾಲಿ, ಉಪಾಧ್ಯಕ್ಷೆ ಪುಷ್ಪ, ಅಬ್ದುಲ್ ಹಮೀದ್ ಗೊಳ್ತಮಜಲ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಿರಂಜನ್ ಸ್ವಾಗತಿಸಿ, ಶಿಕ್ಷಕ ರಪೀಕ್ ವಂದಿಸಿದರು. ಶಿಕ್ಷಕಿ ಅನುಷಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News