ಕ್ಷಯ ರೋಗಕ್ಕೆ ನೂತನ ಚಿಕಿತ್ಸೆ: ನೋವಿನ ಇಂಜೆಕ್ಷನ್‌ಗಳಿಗೆ ಕೊನೆ

Update: 2019-12-13 14:32 GMT

ನ್ಯೂಯಾರ್ಕ್, ಡಿ. 13: ಔಷಧಕ್ಕೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವ ಕ್ಷಯರೋಗದ ಚಿಕಿತ್ಸೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಬದಲಾಯಿಸಿದೆ. ಕ್ಷಯರೋಗದ ಚಿಕಿತ್ಸೆಯಲ್ಲಿ ತುಂಬಾ ಸಮಯದಿಂದ ಭಾಗವಾಗಿರುವ ಔಷಧಿಗಳನ್ನು ಹೊರಗಿಡಲಾಗಿದೆ. ಅದೂ ಅಲ್ಲದೆ, ಚಿಕಿತ್ಸಾ ಅವಧಿಯಲ್ಲೂ ಕಡಿತವಾಗಿಲಿದೆ.

ಕ್ಷಯರೋಗದ ಚಿಕಿತ್ಸೆಯಲ್ಲಿ ‘ಬೆಡಕ್ವಿಲಿನ್’ಗೆ ನೀಡುತ್ತಿರುವ ಆದ್ಯತೆಯನ್ನು ಹೆಚ್ಚಿಸಲು ಡಬ್ಲ್ಯುಎಚ್‌ಒ ನಿರ್ಧರಿಸಿದೆ. ಈ ಔಷಧವು ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ ಹಾಗೂ ಸ್ವೀಕಾರಾರ್ಹವಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನೂತನ ಔಷಧ ‘ಪ್ರಿಟೊಮನಿಡ್’ನ್ನೂ ನೂತನ ಚಿಕಿತ್ಸೆಯಲ್ಲಿ ಶಿಫಾರಸು ಮಾಡಿದೆ. ಆದರೆ ಸದ್ಯಕ್ಕೆ ಅದರ ಪೂರೈಕೆ ಮತ್ತು ಬಳಕೆಯನ್ನು ಸೀಮಿತವಾಗಿಸಿದೆ.

ಬೆಡಕ್ವಿಲಿನ್ ಮತ್ತು ಪ್ರಿಟೊಮನಿಡ್ ಔಷಧಗಳನ್ನು ಬಾಯಿ ಮೂಲಕ ತೆಗೆದುಕೊಳ್ಳಬಹುದಾಗಿದೆ. ಅವುಗಳು ರೋಗದ ಚಿಕಿತ್ಸಾ ಅವಧಿಯನ್ನು ಕಿರಿದುಗೊಳಿಸಬಹುದಾಗಿವೆ ಹಾಗೂ ಔಷಧಕ್ಕೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವ ಕ್ಷಯರೋಗದ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ.

ಸೂಜಿಯ ಮೂಲಕ ನೀಡಬೇಕಾದ ಔಷಧಿಗಳ ಜಾಗದಲ್ಲಿ ನೂತನ ಔಷಧಗಳು ಬಂದಿದ್ದು, ನೋವಿನ ಚಿಕಿತ್ಸಾ ವಿಧಾನವು ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News