ಬ್ರಿಟನ್: ಪ್ರೀತಿ ಪಟೇಲ್, ನಾರಾಯಣ ಮೂರ್ತಿ ಅಳಿಯಗೆ ಜಯ

Update: 2019-12-13 16:21 GMT

ಲಂಡನ್, ಡಿ. 13: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯ ಅಳಿಯ ರಿಶಿ ಸುನಾಕ್ ಕನ್ಸರ್ವೇಟಿವ್ ಪಕ್ಷದಿಂದ ಸಂಸದನಾಗಿ ಪುನರಾಯ್ಕೆಯಾಗಿದ್ದಾರೆ. ಅವರು 36,693 ಮತಗಳನ್ನು ಪಡೆದಿದ್ದಾರೆ.

ಬ್ರಿಟನ್‌ನ ಮಾಜಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೌಸ್ ಆಫ್ ಕಾಮನ್ಸ್‌ಗೆ ಪುನರಾಯ್ಕೆಯಾಗಿದ್ದಾರೆ. ಅವರು ಪ್ರಧಾನಿ ಬೊರಿಸ್ ಜಾನ್ಸನ್‌ರ ನೂತನ ಸಚಿವ ಸಂಪುಟದಲ್ಲಿ ಪ್ರಮುಖ ಹುದ್ದೆ ಪಡೆಯಲಿದ್ದಾರೆ ಎಂದು ಭಾವಿಸಲಾಗಿದೆ.

ಮಾಜಿ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಸಚಿವ ಅಲೋಕ್ ಶರ್ಮ ರೀಡಿಂಗ್ ವೆಸ್ಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News