ಜೆಎನ್‌ಯು ಪ್ರತಿಭಟನೆ ಹಿನ್ನೆಲೆ: ಎಚ್‌ಆರ್‌ಡಿ ಸಚಿವಾಲಯದ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಎತ್ತಂಗಡಿ

Update: 2019-12-13 16:49 GMT

ಹೊಸದಿಲ್ಲಿ, ಡಿ.13: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳ ಪ್ರತಿಭಟನೆಯ ಮುಂದುವರಿದಿರುವಂತೆಯೇ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯನ್ ಅವರನ್ನು ಮಾನವಸಂಪನ್ಮಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯದಿಂದ ಸಾಮಾಜಿಕ ನ್ಯಾಯ ಖಾತೆಗೆ ವರ್ಗಾಯಿಸಲಾಗಿದೆ.

 ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ಜಾರಿಗೊಳಿಸಿದ ಆದೇಶದ ಪ್ರಕಾರ ಸುಬ್ರಹ್ಮಣ್ಯನ್ ಅವರು ಇನ್ನು ಮುಂದೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 1985ನ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಸುಬ್ರಹ್ಮಣ್ಯನ್ ಅವರು ಜೆಎನ್‌ಯುನ ಹಳೆ ವಿದ್ಯಾರ್ಥಿ.

ಜೆಎನ್‌ಯು ವಿದ್ಯಾರ್ಥಿಗಳ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ವಿವಾದವನ್ನು ಬಗೆಹರಿಸಲು ಎಚ್‌ಆರ್‌ಡಿ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯನ್ ಒಲವು ತೋರಿದ್ದರೆನ್ನಲಾಗಿದೆ. ಆದರೆ ು ಜೆಎನ್‌ಯು ಆಡಳಿತ ಮಂಡಳಿ ವಿದ್ಯಾರ್ಥಿಗಳ ಬೇಡಿಕೆಗೆ ಮಣಿಯಲು ನಿರಾಕರಿಸುತ್ತಿದೆ.

 ಜೆಎನ್‌ಯುನಲ್ಲಿ ಪರಿಸ್ಥಿತಿಯನ್ನು ಸಹಜತೆಗೆ ತರುವುದಕ್ಕಾಗಿ ಮಾರ್ಗೊಪಾಯ ಗಳನ್ನು ಸೂಚಿಸಲು ಹಾಗೂ ವಿದ್ಯಾರ್ಥಿಗಳು ಮತ್ತು ವಿವಿ ಆಡಳಿತದ ನಡವೆ ಸಂಧಾನವೇರ್ಪಡಿಸಲು ಮಾನವಪಂಪನ್ಮೂಲ ಸಚಿವಾಲಯವು ತ್ರಿ ಸದಸ್ಯ ಸಮಿತಿಯನ್ನು ನೇಮಿಸಿತ್ತು

ಸುಬ್ರಹ್ಮಣ್ಯಂ ಅವರ ವರ್ಗಾವಣೆಯಿಂದ ತೆರವಾಗಿರವ ಉನ್ನತ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವರಿಷ್ಠ ಹುದ್ದೆಗೆ 1985ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಅಮಿತ್‌ಖಾರೆ ಅವರನ್ನು ನೇಮಿಸಲಾಗಿದೆ.

ಹಾಸ್ಟೆಲ್ ಶುಲ್ಕ ಏರಿಕೆಯನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿಗಳು ಕಳೆದ ಅಕ್ಟೋಬರ್ ತಿಂಗಳ ಕೊನೆಯಿಂದ ಪ್ರತಿಭಟನೆಗಿಳಿದಿದ್ದಾರೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಏರಿಕೆಯಲ್ಲಿ ಭಾಗಶಃ ಕಡಿಮೆ ಮಾಡಲು ಒಪ್ಪಿಕೊಂಡಿದ್ದರೂ, ಅದನ್ನು ಒಪ್ಪಿಕೊಳ್ಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ.

ಕೇಂದ್ರ ಸರಕಾರವು ಸಮಸ್ಯೆಯನ್ನು ಬಗೆಹರಿಸುವ ಬದಲು ಉಪಕುಲಪತಿಯವರ ನಿಲುವನ್ನು ಬೆಂಬಲಿಸುವುದರಲ್ಲಿ ಹೆಚ್ಚು ಆಸಕ್ತವಾಗಿದೆಯೆಂದು ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News