ಸಿಂಧುಗೆ ಸಮಾಧಾನಕರ ಗೆಲುವು

Update: 2019-12-13 18:21 GMT

ಗ್ವಾಂಗ್‌ಝೌ(ಚೀನಾ), ಡಿ.13: ಈಗಾಗಲೇ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರಗುಳಿದಿರುವ ಭಾರತದ ಪಿ.ವಿ.ಸಿಂಧು ವರ್ಷಾಂತ್ಯದಲ್ಲಿ ನಡೆಯುವ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನಲ್ಲಿ ‘ಎ’ ಗುಂಪಿನ ಮೂರನೇ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯಾವೊ ವಿರುದ್ಧ ಸಮಾಧಾನಕರ ಗೆಲುವು ದಾಖಲಿಸಿದರು. ಗುರುವಾರ ಸತತ ಎರಡನೇ ಬಾರಿ ಪಂದ್ಯವನ್ನು ಸೋತಿರುವ ಸಿಂಧು ಅವರ ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನವಾಗಿತ್ತು. ಶುಕ್ರವಾರ ನಡೆದ ಮೂರನೇ ಗ್ರೂಪ್ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ 9-18 ಹಿನ್ನಡೆಯಲ್ಲಿದ್ದ ಸಿಂಧು ಆ ಬಳಿಕ ಬಿಂಗ್‌ಜಿಯಾವೊರನ್ನು 21-19, 21-19 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಎ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದರು. ಈ ಗೆಲುವಿನ ಮೂಲಕ ಸಿಂಧು ಚೀನಾ ಆಟಗಾರ್ತಿಯ ವಿರುದ್ಧ ಸತತ 4 ಸೋಲುಗಳಿಂದ ಹೊರಬಂದರು. ಹೆಡ್-ಟು-ಹೆಡ್ ದಾಖಲೆಯಲ್ಲಿ 6-9 ರಿಂದ ಉತ್ತಮಪಡಿಸಿಕೊಂಡರು. ಸಿಂಧು ಇನ್ನು ಮುಂದೆ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News