ಐಪಿಎಲ್ 2020: ಹರಾಜಿನ ಕಣದಲ್ಲಿದ್ದಾರೆ 332 ಆಟಗಾರರು

Update: 2019-12-13 18:22 GMT

ಕೋಲ್ಕತಾ, ಡಿ.13: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)2020ನೇ ಆವೃತ್ತಿಯ ಟೂರ್ನಿಗೆ ಕೋಲ್ಕತಾದಲ್ಲಿ ಡಿ.19ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಒಟ್ಟು 332 ಕ್ರಿಕೆಟಿಗರು ಹರಾಜಿನ ಕಣದಲ್ಲಿದ್ದಾರೆ. 2 ಕೋ.ರೂ. ಗರಿಷ್ಠ ಮೀಸಲು ಮೊತ್ತವಾಗಿದೆ. ವಿದೇಶದ ಏಳು ಆಟಗಾರರಾದ-ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್‌ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಡೇಲ್ ಸ್ಟೇಯ್ನ್ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ 2 ಕೋ.ರೂ.ಮೂಲ ಬೆಲೆ ಇರುವ ಪಟ್ಟಿಯಲ್ಲಿದ್ದಾರೆ.

ರಾಬಿನ್ ಉತ್ತಪ್ಪ ಹರಾಜು ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದು, ಇವರ ಮೂಲ ಬೆಲೆ 1.5 ಕೋ.ರೂ. ಭಾರತದ ಇತರ ಸ್ಟಾರ್ ಆಟಗಾರರಾದ ಪಿಯೂಷ್ ಚಾವ್ಲಾ, ಯೂಸುಫ್ ಪಠಾಣ್ ಹಾಗೂ ಜಯದೇವ್ ಉನದ್ಕಟ್ ಮೂಲ ಬೆಲೆ 1 ಕೋ.ರೂ. ಆಗಿದೆ. ಈ ಬಾರಿ ಬೆಂಗಳೂರು ಬದಲಿಗೆ ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ 971 ಆಟಗಾರರು(ಭಾರತದ 713, ವಿದೇಶದ 258 ಆಟಗಾರರು)ಹೆಸರನ್ನು ನೋಂದಾಯಿಸಿದ್ದರು. ಖಾಲಿ ಇರುವ 73 ಸ್ಥಾನಗಳನ್ನು ಭರ್ತಿ ಮಾಡಲು 215 ಅನುಭವಿ ಆಟಗಾರರು ಹಾಗೂ 754 ಅನನುಭವಿ ಆಟಗಾರರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News