ಕೋಡಿ ಕನ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

Update: 2019-12-19 06:45 GMT

ಉಡುಪಿ, ಡಿ.14: ಕೇಂದ್ರಸರಕಾರವು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನ ವಿರುಧ್ದ ಮಾತ್ರವಲ್ಲ ಇದು ಭಯೋತ್ಪಾಧನೆಗಿಂತಲೂ ಭಯಾನಕವಾಗಿದೆ ಎಂದು ಕೋಡಿ ಕನ್ಯಾಣ ಮಸೀದಿಯ ಖತೀಬ್ ಸಿದ್ದೀಖ್ ಸಖಾಫಿ ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ  ಮುಹಿಯುದ್ದೀನ್ ಜುಮಾ ಮಸೀದಿಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಿನಾಡಿದ ಅವರು, ಒಂದು ಸಮುದಾಯವನ್ನು ಮಾತ್ರ ಗುರಿಯಾಗಿರಿಸಿ ಜಾರಿಗೆ ತಂದ ಈ ಕಾಯ್ದೆ ಸಮುದಾಯ ವಿರುದ್ಧ ಧೋರಣೆಯಾಗಿದೆ. ಇದನ್ನು ಭಾರತೀಯರೆಲ್ಲರೂ ತಿರಸ್ಕರಿಸಬೇಕು ಎಂದು ಕರೆನೀಡಿದರು.

ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮೂಸಾ ಸಾಹೇಬ್, ಕಾರ್ಯದರ್ಶಿ ನಾಸಿರ್, ಖಜಾಂಚಿ ಬಾಷಾ ಸಾಹೆಬ್,  ಮುಖಂಡ ಇಬ್ರಾಹೀಂ ಪಡುಕರೆ ಹಾಗೂ ಜಮಾಅತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News