ನವೆಂಬರ್‌ನಲ್ಲಿ ಅತ್ಯಧಿಕ ಪ್ರಮಾಣದ ಅಮೆಝಾನ್ ಅರಣ್ಯ ನಾಶ

Update: 2019-12-14 15:38 GMT
ಸಾಂದರ್ಭಿಕ ಚಿತ್ರ

ಸಾವೊ ಪೌಲೊ (ಬ್ರೆಝಿಲ್), ಡಿ. 14: 2015ರಲ್ಲಿ ದಾಖಲೀಕರಣ ಆರಂಭಗೊಂಡ ಬಳಿಕ, ಬ್ರೆಝಿಲ್‌ನ ಅಮೆಝಾನ್ ದಟ್ಟಾರಣ್ಯದ ಅರಣ್ಯ ನಾಶ ನವೆಂಬರ್‌ನಲ್ಲಿ ಅತ್ಯಧಿಕವಾಗಿತ್ತು ಎಂದು ಶುಕ್ರವಾರ ಪ್ರಕಟಗೊಂಡ ಪ್ರಾಥಮಿಕ ಸರಕಾರಿ ಅಂಕಿಅಂಶಗಳು ತಿಳಿಸಿವೆ.

ಜಗತ್ತಿನ ಅತ್ಯಂತ ಬೃಹತ್ ದಟ್ಟಾರಣ್ಯದ 563 ಚದರ ಕಿ.ಮೀ. ಭಾಗವನ್ನು ನವೆಂಬರ್‌ನಲ್ಲಿ ನಾಶಪಡಿಸಲಾಗಿದೆ ಎಂದು ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಐಎನ್‌ಪಿಇ ತಿಳಿಸಿದೆ. ಇದು ಕಳೆದ ವರ್ಷದ ನವೆಂಬರ್‌ನಲ್ಲಿ ಆಗಿರುವ ಅರಣ್ಯ ನಾಶಕ್ಕೆ ಹೋಲಿಸಿದರೆ 103 ಶೇಕಡದಷ್ಟು ಹೆಚ್ಚಾಗಿದೆ.

ಈ ವರ್ಷದ ಜನವರಿಯಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಅಮೆಝಾನ್ ಅರಣ್ಯದ 8,934 ಚದರ ಕಿ.ಮೀ. ಪ್ರದೇಶವನ್ನು ನಾಶವಾಗಿದೆ. ಇದು ಪೋರ್ಟರಿಕೊ ದೇಶದ ಗಾತ್ರದಷ್ಟಾಗುತ್ತದೆ. 2018ರ ಇದೇ ಅವಧಿಯಲ್ಲಿ ನಾಶವಾದ ಅರಣ್ಯಕ್ಕಿಂತ 83 ಶೇಕಡ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News