ಅಮೆರಿಕದ ಹಿತಾಸಕ್ತಿಗೆ ಹಾನಿಯಾದರೆ ನಿರ್ಣಾಯಕ ಪ್ರತಿಕ್ರಿಯೆ: ಇರಾನ್‌ಗೆ ಅಮೆರಿಕ ಎಚ್ಚರಿಕೆ

Update: 2019-12-14 15:45 GMT

ವಾಶಿಂಗ್ಟನ್, ಡಿ. 14: ಇರಾಕ್‌ನಲ್ಲಿರುವ ಅಮೆರಿಕದ ಹಿತಾಸಕ್ತಿಗಳಿಗೆ ಹಾನಿಯಾದರೆ ‘ನಿರ್ಣಾಯಕ’ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಎಚ್ಚರಿಸಿದ್ದಾರೆ.

ಅಮೆರಿಕದ ನೆಲೆಗಳ ಮೇಲೆ ನಡೆದ ಸರಣಿ ರಾಕೆಟ್ ದಾಳಿಗಳ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.

 ‘‘ಅಮೆರಿಕನ್ನರು, ನಮ್ಮ ಮಿತ್ರ ಪಕ್ಷಗಳು ಅಥವಾ ನಮ್ಮ ಹಿತಾಸಕ್ತಿಗಳಿಗೆ ಹಾನಿ ಮಾಡುವ ಯಾವುದೇ ದಾಳಿಗಳಿಗೆ ಅಮೆರಿಕದ ನಿರ್ಣಾಯಕ ಪ್ರತಿಕ್ರಿಯೆಯ ಮೂಲಕ ಉತ್ತರಿಸಲಾಗುವುದು ಎಂದು ಇರಾನ್ ನಾಯಕರನ್ನು ಎಚ್ಚರಿಸಲು ನಾವು ಈ ಅವಕಾಶವನ್ನು ಬಳಸುತ್ತಿದ್ದೇವೆ. ದಾಳಿಯನ್ನು ಅವರು ಮಾಡಿರಬಹುದು ಅಥವಾ ಅವರ ಪರವಾಗಿ ಯಾರಾದರೂ ಮಾಡಿರಬಹುದು. ನಮ್ಮ ಪ್ರತಿಕ್ರಿಯೆ ಕಠಿಣವಾಗಿರುತ್ತದೆ’’ ಎಂದು ಹೇಳಿಕೆಯೊಂದರಲ್ಲಿ ಪಾಂಪಿಯೊ ತಿಳಿಸಿದ್ದಾರೆ.

‘‘ಇರಾನ್ ತನ್ನ ನೆರೆಯ ದೇಶಗಳ ಸಾರ್ವಭೌಮತೆಯನ್ನು ಗೌರವಿಸಬೇಕು ಹಾಗೂ ಇರಾಕ್ ಮತ್ತು ಈ ವಲಯದಾದ್ಯಂತ ಇರುವ ತೃತೀಯ ಪಕ್ಷಗಳಿಗೆ ಮಾರಕ ಆಯುಧಗಳು ಮತ್ತು ಬೆಂಬಲವನ್ನು ನೀಡುವುದನ್ನು ಇರಾನ್ ತಕ್ಷಣ ನಿಲ್ಲಿಸಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News