ದಿಲ್ಲಿಯಲ್ಲಿ ಹಾಲು ದುಬಾರಿ

Update: 2019-12-14 17:47 GMT

ಹೊಸದಿಲ್ಲಿ, ಡಿ.14: ದಿಲ್ಲಿ-ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಮದರ್ ಡೈಲಿ ಹಾಲು ಉತ್ಪನ್ನ ಸಂಸ್ಥೆಯು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ.ನಂತೆ ಏರಿಕೆ ಮಾಡಿದೆ. ಈ ಪ್ರದೇಶದಲ್ಲಿ ಮದರ್‌ಡೈರಿ ಸಂಸ್ಥೆಯು ದಿನಂಪ್ರತಿ 30 ಲಕ್ಷ ಲೀಟರ್ ಹಾಲನ್ನು ಪೂರೈಕೆ ಮಾಡುತ್ತಿದೆ.

ನೂತನ ದರಪರಿಷ್ಕರಣೆಯನ್ವಯ ಟೋಕನ್ ಮಿಲ್ಕ್ ಶ್ರೇಣಿಯ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2ರೂ.ನಷ್ಟು ಏರಿಕೆ ಮಾಡಿದ್ದು, ಈಗ 42 ರೂ. ಆಗಿದೆ. ಟೋನ್ಡ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಲಾಗಿದ್ದು, 45 ರೂ.ಆಗಿದೆ ಅದೇ ರೀತಿಯ ಡಬ್ಬಲ್‌ಟೋನ್ಡ್ ಹಾಲು ಪ್ರತಿ ಲೀಟರ್‌ಗೆ 45 ರೂ. ದರದಲ್ಲಿ ಲಭ್ಯವಾಗಲಿದೆ. ದನದ ಹಾಲಿನ ದರ ಈಗ ಲೀಟರ್‌ಗೆ 47 ರೂ. ಆಗಿದ್ದು, ಪ್ರತಿ ಲೀಟರ್‌ಗೆ 3 ರೂ.ಹೆಚ್ಚಳವಾಗಿದೆ.

ದೀರ್ಘವಾದ ಮುಂಗಾರು ಹಾಗೂ ಹಾಲಿನ ಉತ್ಪಾದನೆ ಅಧಿಕಗೊಳ್ಳುವ ಋತುವಿನ ಆರಂಭ ವಿಳಂಬಗೊಂಡಿರುವುದು ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿವಿಧ ರಾಜ್ಯಗಳಿಂದ ಹಾಲಿನ ಲಭ್ಯತೆಯು ತೀವ್ರ ಒತ್ತಡಕ್ಕೊಳಗಾಗಿದೆಯೆಂದು’’ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಮಧ್ಯೆ ಗುಜರಾತ್ ಮೂಲದ ಹೈನೋದ್ಯಮ ಸಂಸ್ಥೆಯಾದ ಅಮುಲ್ ಕೂಡಾ ತನ್ನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News