ಮುಖ್ಯಮಂತ್ರಿಯ ಸಹೋದರನ ಅಪಹರಣ: ಐವರ ಬಂಧನ

Update: 2019-12-14 17:53 GMT

ಮಣಿಪುರ, ಡಿ.14: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ಐದು ಮಂದಿ ಯ ಗುಂಪೊಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್ ಅವರ ಸಹೋದರ ತೊಂಗ್‌ ಬ್ರಾಮ್ ಲುಖೊಯಿ ಸಿಂಗ್ ಅವರ ವಸತಿಗೆ ನುಗ್ಗಿ, ಅವರನ್ನು ಅಪಹರಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ ಪೊಲೀಸರು ಅವರನ್ನು ಕೆಲವೇ ತಾಸುಗಳಲ್ಲಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ ಹಾಗೂ ಐವರು ಅಪಹರಣಕಾರರನ್ನು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ಮಣಿಪುರದರೆಂದು ಮೂಲಗಳು ತಿಳಿಸಿದ್ದಾರೆ.

ಆಟಿಕೆಯ ಪಿಸ್ತೂಲ್‌ಗಳನ್ನು ಹಿಡಿದಿದ್ದ ಆರೋಪಿಗಳು ಶುಕ್ರವಾರ ಕೋಲ್ಕತಾದ ನ್ಯೂಟೌನ್ ಪ್ರದೇಶದಲ್ಲಿರುವ ಲುಖೋಯಿ ಸಿಂಗ್ ಅವರ ಬಾಡಿಗೆ ಅಪಾರ್ಟ್ ಮೆಂಟ್‌ಗೆ ನುಗ್ಗಿ ಅವರನ್ನು ಹಾಗೂ ಸಹವರ್ತಿಯೊಬ್ಬರನ್ನು ಅಪಹರಿಸಿದ್ದರು. ಆನಂತರ ಅವರು ಸಿಂಗ್‌ರ ಪತ್ನಿಗೆ ಕರೆ ಮಾಡಿ, 15 ಲಕ್ಷ ರೂ. ಹಣ ನೀಡುವಂತೆ ಬೇಡಿಕೆಯಿರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್‌ರ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಶುಕ್ರವಾರ ಸಂಜೆ ಇಬ್ಬರನ್ನು ರಕ್ಷಿಸಿದ್ದಾರೆ ಹಾಗೂ ಮಧ್ಯ ಕೋಲ್ಕತಾದ ಬೆನಿಯಾಪುಕುರ್ ಪ್ರದೇಶದಿಂದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಐವರು ಆರೋಪಿಗಳ ಪೈಕಿ ಇಬ್ಬರು ಮಣಿಪುರದವರಾಗಿದ್ದು, ಉಳಿದಿಬ್ಬರು ಕೋಲ್ಕತಾದವರು ಮತ್ತೊಬ್ಬ ಪಂಜಾಬ್ ರಾಜ್ಯದವನೆಂದು ತಿಳಿದುಬಂದಿದೆ.

ಆರೋಪಿಗಳಿಂದ ಎರಡು ವಾಹನಗಳು ಹಾಗೂ ಮೂರು ಆಟಿಕೆ ಬಂಧೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News