2020ರ ಟ್ವೆಂಟಿ-20 ವಿಶ್ವ ಕಪ್‌ಲ್ಲಿ ಧೋನಿ ಆಡುತ್ತಾರೆ: ಬ್ರಾವೊ ವಿಶ್ವಾಸ

Update: 2019-12-14 17:57 GMT

ಹೊಸದಿಲ್ಲಿ, ಡಿ.14: ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಭಾಗವಹಿಸಲಿದ್ದಾರೆ ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಘೋಷಿಸಿರುವ ವೆಸ್ಟ್‌ಇಂಡೀಸ್‌ನ ಹಿರಿಯ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ವಿಶ್ವಾಸ ವ್ಯಕ್ತಪಡಿಸಿದರು.

ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿರುವ ಬ್ರಾವೊ, ‘‘ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ತನ್ನ ಪಂದ್ಯದ ಮೇಲೆ ಬಾಹ್ಯ ಅಂಶಗಳು ಪರಿಣಾಮಬೀರಲು ಅವಕಾಶ ನೀಡಿಲ್ಲ. ಧೋನಿ ನಿವೃತ್ತಿಯಾಗುವುದಿಲ್ಲ. ನನ್ನ ಪ್ರಕಾರ ಅವರು ಟ್ವೆಂಟಿ-20 ವಿಶ್ವಕಪ್‌ಗೆ ಇರುತ್ತಾರೆ. ನೀವು ಹೆದರಬೇಡಿ ಹಾಗೂ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ ಅವರು ನಮಗೆ ಕಿವಿಮಾತು ಹೇಳುತ್ತಿದ್ದರು’’ಎಂದು ಆಂಗ್ಲಪತ್ರಿಕೆಗೆ ತಿಳಿಸಿದರು.

ಭಾರತ ಈ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಮುಗ್ಗರಿಸಿದ ಬಳಿಕ ಧೋನಿ ದೀರ್ಘ ವಿಶ್ರಾಂತಿ ಪಡೆದಿದ್ದಾರೆ. ಅವರ ವೃತ್ತಿಭವಿಷ್ಯ ಹಾಗೂ ಭವಿಷ್ಯದ ಯೋಜನೆಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.

‘‘ಕಿರೊನ್ ಪೊಲಾರ್ಡ್ ನಾಯಕತ್ವದಲ್ಲಿ ವೆಸ್ಟ್‌ಇಂಡೀಸ್ ತಂಡ ಉತ್ತಮ ಪ್ರದರ್ಶನ ಪುನರಾವರ್ತಿಸಲು ನಾನು ನೆರವಾಗಲು ಬಯಸಿದ್ದೇನೆ. ವಿಂಡೀಸ್‌ನ ಟ್ವೆಂಟಿ-20 ತಂಡದಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ಮೈದಾನದ ಹೊರಗಿನ ರಾಜಕೀಯದಿಂದಾಗಿ ನಾನು ನಿವೃತ್ತಿಯಾಗಿದ್ದೆ.ಮೈದಾನದ ಒಳಗೆ ಹಾಗೂ ಹೊರಗಿನ ನಾಯಕತ್ವದಲ್ಲೀಗ ಬದಲಾವಣೆಯಾಗಿದೆ. ಹೀಗಾಗಿ ಕ್ರಿಕೆಟ್‌ಗೆ ಪುನರಾಗ ಮನವಾಗಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ’’ ಎಂದು ಆಲ್‌ರೌಂಡರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News