ವಿಶ್ವನಾಥನ್ ಆನಂದ್ ಆತ್ಮಚರಿತ್ರೆ ‘ಮೈಂಡ್ ಮಾಸ್ಟರ್’ಬಿಡುಗಡೆ

Update: 2019-12-14 18:12 GMT

ಚೆನ್ನೈ, ಡಿ.14: ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಆತ್ಮಚರಿತ್ರೆ ‘ಮೈಂಡ್ ಮಾಸ್ಟರ್’ ಪುಸ್ತಕವನ್ನು ಖಾಸಗಿ ಹೊಟೇಲ್‌ವೊಂದರಲ್ಲಿ ಶುಕ್ರವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.

ಕ್ರೀಡಾ ಪತ್ರಕರ್ತ ಸುಸಾನ್ ನಿನಾನ್ ಪುಸ್ತಕದ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ.

ಪುಸ್ತಕದ ಕೆಲವು ಭಾಗವನ್ನು ಓದಿದ ಟಿಎಚ್‌ಜಿ ಪ್ರಕಾಶನ ಪ್ರೈ.ಲಿ.ನ ಎನ್.ರಾಮ್, ಪುಸ್ತಕದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಪುಸ್ತಕದಲ್ಲಿ ಆಸಕ್ತಿದಾಯಕ ಪ್ರಯಾಣವಿದೆ. ನನ್ನ ವೃತ್ತಿಜೀವನದ ಪ್ರಮುಖ ನೆನಪುಗಳು ಇದರಲ್ಲಿದೆ ಎಂದು 50ರ ವಯಸ್ಸಿನ ಆನಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News