ಬ್ಲಡ್ ಡೋನರ್ಸ್ ಮಂಗಳೂರು ಮಹಿಳಾ ಘಟಕದಿಂದ ರಕ್ತದಾನ ಶಿಬಿರ

Update: 2019-12-16 08:12 GMT

ಮಂಗಳೂರು : ಬ್ಲಡ್ ಡೋನರ್ಸ್ ವುಮೆನ್ಸ್ ವಿಂಗ್ ಮಂಗಳೂರು ಹಾಗೂ ಯೇನಪೋಯ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಸಹಭಾಗಿತ್ವದಲ್ಲಿ  ಪ್ರಥಮ ರಕ್ತದಾನ ಶಿಬಿರ ಹಾಗೂ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಉರ್ದು ಶಾಲೆ ಬಂದರ್ ನಲ್ಲಿ  ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಡ್ ಡೋನರ್ಸ್ ಮಂಗಳೂರು ಮಹಿಳಾ ಘಟಕದ ಗೌರವಾಧ್ಯಕ್ಷೆ ಆಯಿಷಾ ಯು ಕೆ ಅವರು ಮಾತನಾಡುತ್ತಾ, 'ಪ್ರತಿಯೊಂದು ಕ್ಷೇತ್ರದಲ್ಲೂ ತಾವು ಪುರುಷರಿಗೆ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿರುವ ಮಹಿಳೆಯರು ಜೀವ ಉಳಿಸುವ ರಕ್ತದಾನದ ಮಹಾಕಾರ್ಯಕ್ಕೂ ಮುಂದಡಿ ಇಟ್ಟಿದ್ದಾರೆ. ರಕ್ತದಾನದ‌ ಅಗತ್ಯ ಮತ್ತು ಮಹತ್ವ ಅರಿತು ರಕ್ತದಾನ ಮಾಡುವಂತಹ ಸನ್ಮನಸ್ಸು ನಮ್ಮಲ್ಲಿ ಉಂಟಾಗಬೇಕು. ರಕ್ತದಾನ ಮಾಡುವುದರಿಂದ ನಮ್ಮ ಅರೋಗ್ಯ ಕಾಪಾಡುವುದರ ಜೊತೆಗೆ ಸಮಾಜದ ಆರೋಗ್ಯವನ್ನು ಕಾಪಾಡಬಹುದು. ಯುವ ಜನತೆಗೆ ಜಾಗೃತಿ ಮೂಡಿಸುತ್ತಾ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿರುವ 'ಬ್ಲಡ್ ಡೋನರ್ಸ್ ಮಂಗಳೂರು' ಇದರ ಸಹಕಾರದಿಂದ  ಮುಂದಕ್ಕೆ ಇನ್ನಷ್ಟು ಸೇವಾ ಕಾರ್ಯಗಳನ್ನು ವುಮೆನ್ಸ್ ವಿಂಗ್ ನಡೆಸಲಿದೆ' ಎಂದವರು ತಿಳಿಸಿದರು. 

ಗೀತಾ ಜಿ.ಭಟ್, ಪ್ರಾಂಶುಪಾಲೆ ಅನುಗ್ರಹ ವುಮೆನ್ಸ್ ಕಾಲೇಜು, ಕಲ್ಲಡ್ಕ ಕಾರ್ಯಕ್ರಮ  ಉದ್ಘಾಟಿಸಿ ರಕ್ತದಾನದ ಮಹತ್ವ ಕುರಿತು ಮಾತನಾಡಿ ಅತ್ಯುತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸುದಲ್ಲದೇ ಇನ್ನೂ ಮುಂದಕ್ಕೂ ಹೀಗೆ ಸಾಮಾಜಿಕ ರಂಗದಲ್ಲಿ ಗುರುತಿಸುವಂತಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಫ್ಲೋರ ಕ್ಯಾಸ್ತಲೀನೋಲ್ ಅಲೋಶಿಯ್ಸ್ ಕಾಲೇಜಿನ ಉಪನ್ಯಾಸಕಿ , ಝೀನತ್ ಶಂಶುದ್ದೀನ್ ಸದಸ್ಯೆ ಮಂಗಳೂರು ಮಹಾನಗರ ಪಾಲಿಕೆ, ಶಹನಾಝ್ ಎಂ ಸ್ಥಾಪಕಧ್ಯಕ್ಷೆ ಸಹನಾ ಕೌನ್ಸಿಲಿಂಗ್ ಮಂಗಳೂರು, ಬ್ಲಡ್ ಡೋನಾರ್ಸ್ ಮಹಿಳಾ ಘಟಕದ ಅಧ್ಯಕ್ಷೆ  ಆಯಿಷಾ ಪೆರ್ನೆ ಉಪಸ್ಥಿತರಿದ್ದರು.

ಸರಕಾರಿ ಉರ್ದು ಶಾಲೆಯಲ್ಲಿ 25 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಸುನಾಲಿನಿ ಇವರನ್ನು ಗುರುತಿಸಿ ಬ್ಲಡ್ ಡೋನರ್ಸ್ ಮಹಿಳಾ ಘಟಕ ಸನ್ಮಾನಿಸಿತು.

ಭಾರತಿ ಪ್ರಶಾಂತ್ ಸ್ವಾಗತಿಸಿ, ಮುಫೀದ ರಹ್ಮಾನ್ ವಂದಿಸಿ, ಶಬಾಬ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News