ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು: ಜಾಮಿಯಾ ವಿಸಿ

Update: 2019-12-19 08:41 GMT

ಹೊಸದಿಲ್ಲಿ, ಡಿ.16: ವಿವಿ ಕಾಂಪಸ್ ಗೆ  ಪೊಲೀಸರ ಪ್ರವೇಶದ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ನಾವು ಉನ್ನತ ಮಟ್ಟದ ವಿಚಾರಣೆಗೆ ಒತ್ತಾಯಿಸುತ್ತೇವೆ."ಎಂದು ಜಾಮಿಯಾ ಮಿಲ್ಲಿಯಾ  ವಿಶ್ವವಿದ್ಯಾಲಯದ ಉಪಕುಲಪತಿ ನಜ್ಮಾ ಅಖ್ತರ್ ತಿಳಿಸಿದ್ದಾರೆ.

 ನಜ್ಮಾ ಅಖ್ತರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ  "ಏನಾಯಿತು ಎಂಬುದು ಸ್ವೀಕಾರಾರ್ಹವಲ್ಲ. ವಿಶ್ವವಿದ್ಯಾಲಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ, ಈ ನಷ್ಟವನ್ನು ಯಾರು ಭರಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ ಇದು ವಿದ್ಯಾರ್ಥಿಗಳ ಮೇಲೆ ಭಾವನೆಗಳಿಗೆ ಧಕ್ಕೆ ಉಂಟಾಗಿದೆ " ಎಂದು ಹೇಳಿದ್ದಾರೆ.

ರವಿವಾರ ರಾತ್ರಿ ಅನುಮತಿಯಿಲ್ಲದೆ ಕ್ಯಾಂಪಸ್‌ಗೆ ಪ್ರವೇಶಿಸಿದರು ಮತ್ತು ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಕಳೆದ ರಾತ್ರಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ  ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಾಮಿಯಾ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದಿದ್ದಾರೆ.

ರಾಜಕೀಯವಾಗಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಪುನರಾರಂಭಿಸಲು ವಿದ್ಯಾರ್ಥಿಗಳ ಮತ್ತೊಂದು ಗುಂಪು ಮಾನವ ಸರಪಳಿಯನ್ನು ರಚಿಸಿದೆ.

ಈ ಮಧ್ಯೆ, ಡಿಸೆಂಬರ್ 18 ರಂದು ಹೊಸ ಪೌರತ್ವ ಕಾನೂನಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವಾರ ಅಸ್ಸಾಂ ಮತ್ತು ಬಂಗಾಳದಲ್ಲಿ ಪ್ರಾರಂಭವಾದ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಈಗ ದಿಲ್ಲಿ ಮತ್ತು ಉತ್ತರ ಪ್ರದೇಶಗಳಿಗೆ ಹರಡಿವೆ, ಹೈದರಾಬಾದ್ ಮತ್ತು ಮುಂಬೈ ವಿಶ್ವವಿದ್ಯಾಲಯಗಳು ಒಗ್ಗಟ್ಟಿನ ಮೆರವಣಿಗೆಗಳಿಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News