ವಿದ್ಯಾರ್ಥಿಗಳೆಂಬ ಕಾರಣಕ್ಕೆ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ: ಜಾಮಿಯಾ ಘಟನೆ ಬಗ್ಗೆ ಸಿಜೆಐ ಬೊಬ್ಡೆ

Update: 2019-12-19 08:40 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯದ ವಿಚಾರಣೆ ನಡೆಸುವುದಕ್ಕೂ ಮೊದಲು 'ಹಿಂಸಾಚಾರ ನಿಲ್ಲಬೇಕು' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆ ಹೇಳಿದ್ದಾರೆ.

ನಾಳೆ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ.

"ಅವರು ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಎಲ್ಲವೂ ಶಾಂತವಾದ ನಂತರ ಈ ಬಗ್ಗೆ ನಿರ್ಧಾರವಾಗಬೇಕು. ನಾವು ಏನನ್ನಾದರೂ ನಿರ್ಧರಿಸಬೇಕಾದ ಸಮಯ ಇದಲ್ಲ. ಹಿಂಸಾಚಾರ ನಿಲ್ಲಲಿ" ಎಂದು ಸಿಜೆಐ ಬೊಬ್ಡೆ ಹೇಳಿದರು.

ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಗಮನಿಸುವಂತೆ ಮತ್ತು ಎರಡೂ ವಿವಿಗಳಿಗೆ ನಿವೃತ್ತ ನ್ಯಾಯಾಧೀಶರನ್ನು ಕಳಿಸಿ ತನಿಖೆ ನಡೆಸುವಂತೆ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಕಾಲಿನ್ ಗೊನ್ಸಾಲ್ವಿಸ್ ಮನವಿ ಮಾಡಿದರು.

"ಆಸ್ತಿಗಳನ್ನು ಏಕೆ ದ್ವಂಸಗೈಯಲಾಗಿದೆ? ಬಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರವನ್ನು ಯಾರು ಆರಂಭಿಸಿದ್ದಾರೋ ಅವರೇ ನಿಲ್ಲಿಸಲಿ" ಎಂದು ಬೊಬ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News