ಆಸ್ಟ್ರೇಲಿಯ ‘ಎ’ ತಂಡಕ್ಕೆ ಅನಧಿಕೃತ ಏಕದಿ ಸರಣಿ

Update: 2019-12-16 18:13 GMT

ಬ್ರಿಸ್ಬೇನ್, ಡಿ.16: ವನಿತೆಯರ ಅನಧಿಕೃತ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ‘ಎ’ ವಿರುದ್ಧ ಆಸ್ಟ್ರೇಲಿಯ‘ಎ’ ತಂಡ 3 ವಿಕೆಟ್‌ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ ಗೆಲುವಿಗೆ 177 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ‘ಎ’ ತಂಡ 39.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು. ಟಾಸ್ ಜಯಿಸಿದ ಭಾರತ ‘ಎ’ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು. ಭಾರತ ‘ಎ’ ತಂಡ ಖಾತೆ ತೆರೆಯುವ ಮೊದಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನುಝಾತ್ ಪರ್ವಿನ್ (0) ಮತ್ತು ಶಫಾಲಿ ವರ್ಮಾ (0) ಖಾತೆ ತೆರೆಯದೆ ನಿರ್ಗಮಿಸಿದರು. ಪ್ರಿಯಾ ಪೂನಿಯಾ(13),ನಾಯಕಿ ವೇದಾ ಕೃಷ್ಣ ಮೂರ್ತಿ (35) ಮತ್ತು ಆರುಂಧತಿ ರೆಡ್ಡಿ(45), ಡಿ. ಹೇಮಲತಾ(20) ಮತ್ತು ಮನಾಲಿ ದಾಕ್ಷಿಣಿ(ಔಟಾಗದೆ 23) ಸಹಾಯದಿಂದ ಭಾರತ ‘ಎ’ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು.

     ಆಸ್ಟ್ರೇಲಿಯ‘ಎ’ ತಂಡದ ಮೋಲಿ ಸ್ಟಾರ್ನೊ 26ಕ್ಕೆ 3, ಅನಾಬೆಲ್ ಸದರ್‌ಲ್ಯಾಂಡ್ 33ಕ್ಕೆ 2 ಮತ್ತು ತಾಲಿಯಾ ಮೆಕ್‌ಗ್ರಾತ್ 39ಕ್ಕೆ 2 ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯ ‘ಎ’ ತಂಡದ ಎರಿನ್ ಬರ್ನ್ಸ್ (ಔಟಾಗದೆ 53) ಜಾರ್ಜಿಯಾ ರೆಡ್‌ಮೈನ್ (41) ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು. ಭಾರತದ ಹೇಮಲತಾ 35ಕ್ಕೆ 3 ವಿಕೆಟ್ ಮತ್ತು ಟಿ.ಪಿ. ಕನ್ವೀರ್ 29ಕ್ಕೆ 2 ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News