​ಕಾಸರಗೋಡು: ಪೌರತ್ವ ಕಾಯ್ದೆ ವಿರೋಧಿಸಿ ಹರತಾಳ

Update: 2019-12-17 09:06 GMT

ಕಾಸರಗೋಡು :  ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೆಲ ಸಂಘಟನೆಗಳು ಇಂದು ಕೇರಳದಲ್ಲಿ  ಹರತಾಳಕ್ಕೆ ಕರೆ ನೀಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹರತಾಳದಿಂದ ಜನಜೀವನ ಅಸ್ತವ್ಯಸ್ಥಗೊಳಿಸಿದೆ.

ಹರತಾಳದಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಖಾಸಗಿ, ಕೆ ಎಸ್ ಆರ್ ಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ . ಶಾಲಾ ಪರೀಕ್ಷೆಗಳು ಮುಂದೂಡದಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ  ಬಹುತೇಕ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ  ತಲುಪಲು ಸಾಧ್ಯವಾಗಿಲ್ಲ.  ಪರೀಕ್ಷೆ  ಮುಂದೂಡಿಲ್ಲ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿದ್ದು , ಇದರಿಂದ ಶಾಲೆಗೆ ತಲುಪಲಾಗದ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಲಾಗಿದೆ.

ಹರತಾಳಕ್ಕೆ  ಕರೆ ನೀಡಿದ್ದ ಕೆಲ ಸಂಘಟನೆಗಳ ಕಾರ್ಯಕರ್ತರನ್ನು  ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ. ಎಸ್ ಡಿ ಪಿ ಐ, ವೆಲ್ಫೇರ್ ಪಾರ್ಟಿ ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳು ಹರತಾಳಕ್ಕೆ ಕೆರೆ ನೀಡಿದ್ದು, ಹರತಾಳ ನಡೆಸುವುದಾಗಿ ಪೊಲೀಸರಿಗೆ ನೋಟಿಸ್ ನೀಡಿಲ್ಲ. ಇದರಿಂದ ಈ ಹರತಾಳ ಕಾನೂನು ವಿರುದ್ಧ ಎಂದು ಪೊಲೀಸರು ಘೋಷಿಸಿದ್ದು, ಕಠಿಣ ಕ್ರಮಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News