ಅಶ್ವಿನ್ ಗೆ ಐದು ವಿಕೆಟ್ ಗೊಂಚಲು: ಹಿಮಾಚಲಪ್ರದೇಶ 158 ರನ್‌ಗೆ ಆಲೌಟ್

Update: 2019-12-17 18:01 GMT

ದಿಂಡಿಗಲ್, ಡಿ.17: ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಆತಿಥೇಯ ತಮಿಳುನಾಡು ತಂಡ ಮಂಗಳವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶವನ್ನು 71.4 ಓವರ್‌ಗಳಲ್ಲಿ 158 ರನ್‌ಗೆ ಆಲೌಟ್ ಮಾಡಿತು.

ಗಾಯಗೊಂಡಿರುವ ವಿಜಯ ಶಂಕರ್ ಅನುಪಸ್ಥಿತಿಯಲ್ಲಿ ತಮಿಳುನಾಡು ತಂಡವನ್ನು ಮುನ್ನಡೆಸಿದ ಬಿ.ಅಪರಾಜಿತ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಆರ್.ಅಶ್ವಿನ್(5-67) ಹಾಗೂ ಎಡಗೈ ಸ್ಪಿನ್ನರ್ ಆರ್.ಸಾಯಿ ಕಿಶೋರ್(3-22)ಹಿಮಾಚಲ ಪ್ರದೇಶದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಪ್ರವಾಸಿ ತಂಡ 100 ರನ್‌ನೊಳಗೆ ಆಲೌಟಾಗುವ ಭೀತಿಯಲ್ಲಿತ್ತು. ತಂಡ 76 ರನ್‌ಗೆ 7 ವಿಕೆಟ್ ಕಳೆದುಕೊಂಡಾಗ ಒಂದಾದ ಆಕಾಶ್ ವಶಿಷ್ಟ(35,94 ಎಸೆತ, 4 ಬೌಂಡರಿ)ಹಾಗೂ ಮಾಯಾಂಕ್ ದಾಗಾರ್(33,62 ಎಸೆತ, 3 ಬೌಂಡರಿ)8ನೇ ವಿಕೆಟ್‌ಗೆ 53 ರನ್ ಸೇರಿಸಿ ತಂಡವನ್ನು ಆಧರಿಸಿದರು. ಈ ಮೂಲಕ ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಕರ್ನಾಟಕದ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್‌ಗಳನ್ನು(ಪ್ರತಿ ಇನಿಂಗ್ಸ್‌ನಲ್ಲಿ ತಲಾ 4)ಕಬಳಿಸಿದರೂ ಕಡಿಮೆ ಅಂತರದಲ್ಲಿ ತಮಿಳುನಾಡು ಸೋಲುಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News