ಪೌರತ್ವ ತಿದ್ದುಪಡಿ ಕಾಯ್ದೆ : ಅನಿವಾಸೀ ಕನ್ನಡಿಗರ ಒಕ್ಕೂಟ ಖಂಡನೆ

Update: 2019-12-18 05:24 GMT

ದುಬೈ : ದೇಶದ ಸಾಂವಿಧಾನಿಕ ಮೌಲ್ಯಕ್ಕೆ ವಿರುದ್ಧವಾಗಿರು, ದೇಶದ ಬಹು ಸಂಸ್ಕೃತಿಗೆ ಧಕ್ಕೆ ತರುವಂತಹ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನಿವಾಸೀ ಕನ್ನಡಿಗರ ಒಕ್ಕೂಟವು ತೀವ್ರವಾಗಿ ಖಂಡಿಸುವುದಾಗಿ ಅನಿವಾಸೀ ಕನ್ನಡಿಗರ ಒಕ್ಕೂಟ ದುಬೈ ಇದರ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಸಂಪೂರ್ಣ ಉಲ್ಲಂಘಿಸುವುದಲ್ಲದೆ ವಿಭಜನೆಯ ಪೂರ್ವ ತಯಾರಿಯೆಂಬಂತೆ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾಸುತ್ತದೆ. ಈ ಕಾನೂನು ದೇಶದೆಲ್ಲೆಡೆ ಜಾರಿಯಾಗುವುದರೊಂದಿಗೆ ಮೂಲ ನಿವಾಸಿಗಳ ಧಾರ್ಮಿಕತೆಗೆ ಧಕ್ಕೆಯುಂಟಾಗುವುದಲ್ಲದೆ ಪ್ರಜೆಗಳ ನಡುವೆ ಹಗೆತನ, ತಾರತಮ್ಯ, ಹಿಂಸೆ, ಅನ್ಯಾಯ ತಾಂಡವಾಡಲಿದೆ. ಸಂವಿಧಾನದ ಮೂಲ ತತ್ವಗಳನ್ನು ಗಾಳಿಗೆ ತೂರಿ ದೇಶದ ಮಾನವೀಯತೆ, ಸಮಾನತೆ, ಜ್ಯಾತ್ಯಾತೀತತೆಗೆ ಭಂಗವುಂಟು ಮಾಡುವ ಈ ಪ್ರಶ್ನಾರ್ಹ ಕಾನೂನನ್ನು ನ್ಯಾಯಾಲಯವು ರದ್ದುಗೊಳಿಸಿ ಸರ್ವರಿಗೂ ಸಮಬಾಳನ್ನು ನೀಡಿ ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಬೇಕಾಗಿ ಗೌರವಪೂರ್ವ ವಿನಂತಿಸುತ್ತೇವೆ. ರಾಷ್ಟ್ರೀಯ ನಾಗರೀಕತಾ ನೋಂದಣಿ ಕಾಯ್ದೆಯನ್ನೂ ಕಾನೂನಾತ್ಮಕವಾಗಿ ವಿರೋಧಿಸುತ್ತೇವೆ ಎಂದು ಅಬ್ದುಲ್ ರಶೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News