ಸೌರವ್ ಗಂಗುಲಿ, ಡೇವಿಡ್ ವಾರ್ನರ್ ಎಲೆಟ್ ಲಿಸ್ಟ್ ಗೆ ರೋಹಿತ್ ಸೇರ್ಪಡೆ

Update: 2019-12-18 18:27 GMT

ವಿಶಾಖಪಟ್ಟಣ, ಡಿ.18: ಫಾರ್ಮ್ ನಲ್ಲಿರುವ ಭಾರತದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಬುಧವಾರ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ವರ್ಷವೊಂದರಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹಾಗೂ ಡೇವಿಡ್ ವಾರ್ನರ್ ಅವರಿದ್ದ ಎಲೈಟ್ ಲಿಸ್ಟ್ ಗೆ ರೋಹಿತ್ ಸೇರ್ಪಡೆಯಾಗಿದ್ದಾರೆ. ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ 28ನೇ ಏಕದಿನ ಶತಕ ಪೂರೈಸಿದರು. ಇದು ಈ ವರ್ಷ ರೋಹಿತ್ ಸಿಡಿಸಿರುವ 7ನೇ ಶತಕವಾಗಿದೆ.

 ಗಂಗುಲಿ ಹಾಗೂ ವಾರ್ನರ್ ಕ್ರಮವಾಗಿ 2000 ಹಾಗೂ 2016ನೇ ವರ್ಷದಲ್ಲಿ ತಲಾ 7 ಶತಕಗಳನ್ನು ಸಿಡಿಸಿದ್ದ ಸಾಧನೆ ಮಾಡಿದ್ದರು. ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವರ್ಷವೊಂದರಲ್ಲಿ ಗರಿಷ್ಠ ಶತಕ ಗಳಿಸಿದ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ 1998ರಲ್ಲಿ ಒಟ್ಟು 9 ಶತಕಗಳನ್ನು ಸಿಡಿಸಿದ್ದರು. ವಿಝಾಗ್‌ನಲ್ಲಿ ಕೆಎಲ್ ರಾಹುಲ್‌ರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 227 ರನ್ ಸೇರಿಸಿದ ರೋಹಿತ್ ಭಾರತದ ಬೃಹತ್ ಮೊತ್ತಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದರು. ಮೂರನೇ ಶತಕ ಸಿಡಿಸಿದ ರಾಹುಲ್ 104 ಎಸೆತಗಳಲ್ಲಿ 102 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News