×
Ad

ಮೆಟ್ರೊ ಸ್ಟೇಶನ್ ಬಂದ್, ಅಂತರ್ಜಾಲ ಸೇವೆ ಸ್ಥಗಿತ,ಜನರ ಧ್ವನಿ ಅಡಗಿಸಲಾಗುತ್ತಿದೆ

Update: 2019-12-19 14:59 IST

ಹೊಸದಿಲ್ಲಿ, ಡಿ.19: ದಿಲ್ಲಿಯ ಮೆಟ್ರೊ ಸ್ಟೇಶನ್ ಬಂದ್ ಆಗಿದೆ. ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಕಡೆ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೇರಲಾಗಿದೆ. ನಿಮಗೆ ಧ್ವನಿ ಎತ್ತಲು ಇಲ್ಲಿ ಅವಕಾಶವೇ ಇಲ್ಲ. ಜನರಿಗೆ ಅರ್ಥಮಾಡಿಸಲು ಜನರ ತೆರಿಗೆ ಹಣದಿಂದ ಜಾಹೀರಾತುಗಳಿಗಾಗಿ ಕೋಟ್ಯಂತರ ರೂ.ವ್ಯಯಿಸುತ್ತಿರುವವರೇ ಇಂದು ಜನರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ನಿಷೇಧಾಜ್ಞೆಯ ನಡುವೆಯೂ ಎಲ್ಲೆಡೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ದಿಲ್ಲಿಯಲ್ಲಿ ಮೊಬೈಲ್ ಡಾಟಾ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, 19 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ.

ದಿಲ್ಲಿ ಪೊಲೀಸರ ತಡೆಬೇಲಿ ರಚಿಸಿದ ಕಾರಣ ಗುರ್ಗಾಂವ್ ಗಡಿ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News