×
Ad

ಕಾಮಿಡಿಯನ್ ಕುನಾಲ್ ಕಾಮ್ರಾಗೆ ಟ್ವೀಟ್ ಮೂಲಕ ಬೆದರಿಕೆ ಹಾಕಿದ ಬಿಜೆಪಿ ನಾಯಕ

Update: 2019-12-19 22:58 IST

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಾಡಿರುವ ಟ್ವೀಟ್‍ ಗೆ ಮರು ಟ್ವೀಟ್ ಮಾಡಿರುವ ಬಿಜೆಪಿಯ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಮೋಹಿತ್ ಭಾರತಿಯ ಬೆದರಿಕೆಯೊಡ್ಡಿದ ಬೆಳವಣಿಗೆ ಸಾಕಷ್ಟು ಚರ್ಚೆಗೀಡಾಗಿದೆ.

"ಪ್ರೀತಿಯ ಪ್ರಧಾನಿ ಮೋದಿ, ಮಾಧ್ಯಮ ನಿಮ್ಮ ಜತೆಗಿದೆ, ಬಾಲಿವುಡ್ ಕೂಡ ನಿಮ್ಮ ಜತೆಗಿದೆ, 353 ಎಂಪಿಗಳು ಕೂಡ, ಎಲ್ಲಾ ಮೂಲಭೂತವಾದಿಗಳೂ, ಭ್ರಷ್ಟ ಕ್ರಿಮಿನಲ್‍ ಗಳು ರೇಪಿಸ್ಟರು, ಆರೆಸ್ಸೆಸ್ ನಿಮ್ಮ ಜತೆಗಿದೆ, ಎನ್ನಾರೈ ಧೋಕ್ಲ ಮಾಫಿಯಾ ಕೂಡ ನಿಮ್ಮ ಜತೆಗಿದೆ ಆದರೆ ನಾವು ಕಲ್ಲುಬಂಡೆಯಂತೆ ನಿಮ್ಮ ವಿರುದ್ಧ ನಿಂತಿದ್ದೇವೆ, ಏಕೆಂದರೆ ದೇಶಕ್ಕೆ ನೀವು ಬೇಕಾಗಿಲ್ಲ,'' ಎಂದು ಕಮ್ರಾ ಟ್ವೀಟ್ ಮಾಡಿ `ಫಿಕ್ಸ್ಡ್ ಇಟ್'' ಎಂಬ ಶೀರ್ಷಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋಹಿತ್, "ಟೇಕ್ ಮೈ ವರ್ಡ್ಸ್, ಯು ವಿಲ್ ಆಲ್ಸೋ ಬಿ ಫಿಕ್ಸ್ಡ್ ಸೂನ್'' (ನನ್ನ ಮಾತು ಕೇಳಿಕೊಳ್ಳಿ, ನಿಮ್ಮನ್ನು ಕೂಡ ಸದ್ಯದಲ್ಲಿಯೇ ನೋಡಿಕೊಳ್ಳುತ್ತೇವೆ), ಎಂದು ಬರೆದಿದ್ದಾರೆ.

ಅಷ್ಟಕ್ಕೂ ಕುನಾಲ್ ಕಾಮ್ರಾ ಅವರ ಟ್ವೀಟ್ ಬಿಜೆಪಿಯ ಐಟಿ ಘಟಕದ ರಾಷ್ಟ್ರೀಯ  ಉಸ್ತುವಾರಿ  ಅಮಿತ್ ಮಾಲವಿಯ ಅವರ ಟ್ವೀಟ್‍ ಗೆ ಪ್ರತಿಕ್ರಿಯೆಯಾಗಿತ್ತು.

 ಮಾಲವಿಯ ತಮ್ಮ ಟ್ವೀಟ್‍ನಲ್ಲಿ ``ಪ್ರೀತಿಯ ಪ್ರಧಾನಿ ಮೋದಿ, ವಿಪಕ್ಷ ನಿಮ್ಮ ವಿರುದ್ಧ ಇದೆ, ಪಾಕಿಸ್ತಾನ, ಮಾಧ್ಯಮ, ಬಾಲಿವುಡ್, ಬುದ್ಧಿಜೀವಿಗಳ ಸೈನ್ಯ, ಭ್ರಷ್ಟರು ಹಾಗೂ ಕ್ರಿಮಿನಲ್‍ಗಳು ನಿಮ್ಮ ವಿರುದ್ಧವಿದ್ದಾರೆ ಆದರೆ ನಾವು ಕಲ್ಲು ಬಂಡೆಯಂತೆ ನಿಮ್ಮ ಜತೆಗಿದ್ದೇವೆ, ಏಕೆಂದರೆ ದೇಶಕ್ಕೆ ನೀವು ಬೇಕಾಗಿದ್ದೀರಿ'' ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News