ದಿಲ್ಲಿಯ ಜಾಮಾ ಮಸೀದಿ ಸಮೀಪ ಭಾರೀ ಪ್ರತಿಭಟನೆ: ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ನೇತೃತ್ವ
Update: 2019-12-20 14:03 IST
ಹೊಸದಿಲ್ಲಿ, ಡಿ.20: ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವ ಜಾಮಾ ಮಸೀದಿ ಸಮೀಪ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಭಾರೀ ಪ್ರತಿಭಟನೆಯ ನೇತೃತ್ವ ವಹಿಸಿದರು.
ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟರನ್ನು ಹಿಡಿದಿಕೊಂಡಿದ್ದ ಆಝಾದ್ ಶುಕ್ರವಾರದ ಪ್ರಾರ್ಥನೆಯ ಬಳಿಕ ಐತಿಹಾಸಿಕ ಮಸೀದಿಯ ಗೇಟ್‌ಗಳ ಒಳಗೆ ತನ್ನ ಬೆಂಬಲಿಗರ ಜೊತೆ ಭಾರೀ ಪ್ರತಿಭಟನೆ ನಡೆಸಿದರು.
ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆ ವಿರುದ್ಧ ಜಾಮಾ ಮಸೀದಿಯಿಂದ ಜಂತರ್ ಮಂತರ್‌ನ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಚಂದ್ರಶೇಖರ ಆಝಾದ್ ಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಜಾಮಾ ಮಸೀದಿಯ ಹೊರಗೆ ಜೈ ಭೀಮ್ ಎಂಬ ಘೋಷಣೆ ಮೊಳಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಯತ್ನಿಸಿದರು. ಚಂದ್ರಶೇಖರ್ ಆಝಾದ್ ರನ್ನು ದಿಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.