ಸಿಎಎ, ಎನ್‌ಆರ್‌ಸಿ ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸುವ ಯತ್ನ: ಸ್ವರ ಭಾಸ್ಕರ್

Update: 2019-12-20 17:37 GMT

ಮುಂಬೈ, ಡಿ. 20: “ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ರಾಷ್ಟ್ರೀಯ ಪೌರತ್ವ ನೋಂದಣಿ ಈ ದೇಶಕ್ಕೆ ಅಗತ್ಯ ಇಲ್ಲ. ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ನೀವು ಹೊಂದಿದ್ದೀರಿ. ಅದ್ನಾನ್ ಸಾಮಿ ಅವರಿಗೆ ಪೌರತ್ವ ನೀಡಲು ಸಾಧ್ಯವಾಗುವುದಾದರೆ, ಇದೇ ಪ್ರಕ್ರಿಯೆ ಆಧಾರದಲ್ಲಿ ಹಿಂದೂ ನಿರಾಶ್ರಿತರಿಗೆ ಯಾಕೆ ಪೌರತ್ವ ನೀಡಬಾರದು ?, ಇದಕ್ಕೆ ನೀವು ಸಂವಿಧಾನವನ್ನು ಯಾಕೆ ಬದಲಾಯಿಸಬೇಕು ?” ಎಂದು ನಟಿ ಸ್ವರ ಭಾಸ್ಕರ್ ಪ್ರಶ್ನಿಸಿದ್ದಾರೆ.

ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಖಂಡಿಸಿದ ಅವರು, ಇದು ಕೇವಲ ವಿವಿಧ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ. ಈ ಸಮಸ್ಯೆಯನ್ನು ಮುಸ್ಲಿಂ ಸಮುದಾಯ ಮಾತ್ರ ಎದುರಿಸುವುದಲ್ಲ. ಬದಲಾಗಿ, ದೇಶದ ಪ್ರತಿ ದುರ್ಬಲ ಹಾಗೂ ಇತರ ಜನರು ಕೂಡ ಈ ಸಮಸ್ಯೆ ಎದುರಿಸಲಿದ್ದಾರೆ. ವಿರೋಧ ಹಾಗೂ ನಿಂದನೆ ನಡುವೆ ವ್ಯತ್ಯಾಸ ಇದೆ. ಇದು ಸೈದ್ಧಾಂತಿಕ ವಿರೋಧ. ಗಾಂಧೀಜಿ ಅವರಿಗೆ ಕೂಡ ಸೈದ್ಧಾಂತಿಕ ವಿರೋಧ ಇತ್ತು. ನಾವು ಸೈದ್ಧಾಂತಿಕ ವಿರೋಧದ ಧ್ವನಿ ಎತ್ತಿದ್ದೇವೆ. ಇದು ಪ್ರಜಾಪ್ರಭುತ್ವದಲ್ಲಿ ವಿರೋಧದ ಒಂದು ಭಾಗ. ಇಂತಹ ಪ್ರತಿಭಟನೆಯಿಂದ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ಪ್ರತಿಭಟನೆ ಪ್ರಜಾಪ್ರಭುತ್ವದ ವಿರೋಧಿ ಅಲ್ಲ. ಬದಲಾಗಿ ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಬಲೀಕರಿಸುತ್ತದೆ. ಈ ಪ್ರತಿಭಟನೆ ದೇಶದ ಹಿಂದೂ, ಮುಸ್ಲಿಂ ಹಾಗೂ ಇತರ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸುತ್ತದೆ ಎಂದು ಸ್ವರ ಭಾಸ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News