ದಿಲ್ಲಿಯಲ್ಲಿ ನಡುಗಿದ ಭೂಮಿ

Update: 2019-12-20 18:18 GMT

ಹೊಸದಿಲ್ಲಿ, ಡಿ.20: ರಾಜಧಾನಿ ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ರವಿವಾರ ಭೂಕಂಪನ ಸಂಭವಿಸಿದೆ. ರಿಕ್ಟರ್‌ಮಾಪಕದಲ್ಲಿ 6.3 ತೀವ್ರತೆಯನ್ನು ದಾಖಲಿಸಿದ ಈ ಭೂಕಂಪನದ ಕೇಂದ್ರ ಬಿಂದು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರಾಂತದಲ್ಲಿತ್ತೆಂದು ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.

 ಸಂಜೆ 5:09ರ ವೇಳೆಗೆ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ದಿಲ್ಲಿ ಹಾಗೂ ಉತ್ತರ ಭಾರತದ ವಿವಿಧೆಡೆ ಭೂಮಿ ನಡುಗಿದ ಅನುಭವಾಗುತ್ತಲೇ ಲವಾರು ಮಂದಿ ಮನೆ ಹಾಗೂ ಕಚೇರಿಗಳಿಂದ ಹೊರಗೋಡಿ ಬಂದರೆಂದು ವರದಿಗಳು ತಿಳಿಸಿವೆ. ಆದರೆ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News