ಪೌರತ್ವ ಸಾಬೀತುಪಡಿಸುವುದು ಹೇಗೆ?: ಆಕ್ರೋಶದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಗೃಹ ಸಚಿವಾಲಯ
Update: 2019-12-21 15:58 IST
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತಣ್ಣಗಾಗುವ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆಗೊಳಿಸಿದ ಗೃಹ ವ್ಯವಹಾರಗಳ ಸಚಿವಾಲಯ, ಯಾವುದೇ ವ್ಯಕ್ತಿ ಅಥವಾ ಅವರ ಹೆತ್ತವರು ತಾವು ಭಾರತದಲ್ಲಿ ಜುಲೈ 1, 1987ಗಿಂತ ಮುಂಚೆ ಹುಟ್ಟಿದವರು ಎಂದು ಸಾಬೀತುಪಡಿಸಿದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಅಸ್ಸಾಂನಲ್ಲಿ ನಡೆಸಲಾಗಿದ್ದ ಎನ್‍ಆರ್ ಸಿಗೆ 1971 ಎಂದು ನಿಗದಿಪಡಿಸಲಾಗಿತ್ತು.
ಆದರೆ ದೇಶವ್ಯಾಪಿ ಎನ್‍ಆರ್ ಸಿ ಸಾಧ್ಯತೆಯ ಕುರಿತಂತೆ ಸಚಿವಾಲಯದ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ ಪೌರತ್ವ ತಿದ್ದುಪಡಿ ಕಾಯಿದೆಗೂ ಎನ್‍ಆರ್ ಸಿಗೂ ಸಂಬಂಧ ಕಲ್ಪಿಸಬಾರದೆಂದು ಅಧಿಕಾರಿಗಳು ಹೇಳಿದ್ದಾರೆ.