ಸುಂದರ್ ಪಿಚೈ ದಿನದ ವೇತನ ಎಷ್ಟು ಕೋಟಿ ರೂ. ಗೊತ್ತಾ ?

Update: 2019-12-21 15:56 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಡಿ. 21: ಗೂಗಲ್ ಮತ್ತು ಅದರ ಮಾತೃಸಂಸ್ಥೆ ಆಲ್ಫಾಬೆಟ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ 2020ರಲ್ಲಿ ತನ್ನ ವಾರ್ಷಿಕ ವೇತನವಾಗಿ 2 ಮಿಲಿಯ ಡಾಲರ್ (ಸುಮಾರು 14.22 ಕೋಟಿ ರೂಪಾಯಿ) ಮತ್ತು 240 ಮಿಲಿಯ ಡಾಲರ್ (ಸುಮಾರು 1,707 ಕೋಟಿ ರೂಪಾಯಿ) ಮೌಲ್ಯದ ಶೇರುಗಳನ್ನು ಪಡೆಯಲಿದ್ದಾರೆ.

ಶೇರು ಪ್ಯಾಕೇಜ್‌ನಲ್ಲಿ ಆಲ್ಫಾಬೆಟ್‌ನ ಕೆಲಸಕ್ಕಾಗಿ ನೀಡಲಾದ 90 ಮಿಲಿಯ ಡಾಲರ್ (ಸುಮಾರು 640 ಕೋಟಿ ರೂಪಾಯಿ) ಸೇರಿದೆ. ಇದರ ಆಧಾರದಲ್ಲಿ ಲೆಕ್ಕ ಹಾಕುವುದಾದರೆ, ಗೂಗಲ್ ಸಿಇಒರ ಒಂದು ದಿನದ ವೇತನ 4.71 ಕೋಟಿ ರೂಪಾಯಿ ಆಗುತ್ತದೆ.

ಸುಂದರ್ ಪಿಚೈರನ್ನು ಈ ತಿಂಗಳ ಆರಂಭದಲ್ಲಿ ಆಲ್ಫಾಬೆಟ್ ಕಂಪೆನಿಯ ಸಿಇಒ ಆಗಿ ನೇಮಿಸಲಾಗಿದೆ. ಮೊದಲು ಈ ಹುದ್ದೆಯಲ್ಲಿದ್ದ ಗೂಗಲ್ ಸಹ ಸಂಸ್ಥಾಪಕರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಭಾರತ ಸಂಜಾತ ಪಿಚೈರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.

ಅದೂ ಅಲ್ಲದೆ, ಜನವರಿ 1ರ ಬಳಿಕ ಸುಂದರ ಪಿಚೈ ಪ್ರತಿ ವರ್ಷ 2 ಮಿಲಿಯ ಡಾಲರ್ (14.22 ಕೋಟಿ ರೂಪಾಯಿ) ವೇತನ ಹೆಚ್ಚಳವನ್ನು ಪಡೆಯಲಿದ್ದಾರೆ ಎಂಬುದಾಗಿಯೂ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಕಮಿಶನ್ (ಎಸ್‌ಇಸಿ)ಗೆ ಶುಕ್ರವಾರ ಸಲ್ಲಿಸಿದ ವಿವರಗಳಲ್ಲಿ ಆಲ್ಫಾಬೆಟ್ ತಿಳಿಸಿದೆ ಎಂದು ‘ಮರ್ಕ್ಯುರಿ ನ್ಯೂಸ್’ನ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News