×
Ad

ಉತ್ತರ ಭಾರತದಲ್ಲಿ ತತ್ತರಿಸಿದ ಬಿಜೆಪಿ: ಅರ್ಧದಷ್ಟು ರಾಜ್ಯಗಳನ್ನು ಕಳೆದುಕೊಂಡ ಕೇಸರಿ ಪಕ್ಷ

Update: 2019-12-23 20:35 IST

2017ರಲ್ಲಿ ಉತ್ತರ ಭಾರತದ ಹಲವು ರಾಜ್ಯಗಳು ಬಿಜೆಪಿಯ ಕೈಯಲ್ಲಿದ್ದು, ಪ್ರಬಲ ಪಕ್ಷವಾಗಿ ಕೇಸರಿ ಪಕ್ಷ ಹೊರಹೊಮ್ಮಿತ್ತು. ಆದರೆ  ಇದೀಗ ಜಾರ್ಖಂಡ್ ನ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವುದರೊಂದಿಗೆ ಬಿಜೆಪಿಯು ಉತ್ತರ ಭಾರತದಲ್ಲಿ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ.

2017ರ ವೇಳೆ ದೇಶದ 71 ಶೇ.ದಷ್ಟು ಬಿಜೆಪಿ ಅಧಿಕಾರಲ್ಲಿದ್ದರೆ, ಈಗ ಈ ಪ್ರಮಾಣ 37 ಶೇಕಡಕ್ಕೆ ಕುಸಿದಿದೆ. ಲೋಕಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದರೂ ಇತ್ತೀಚಿನ ಸೋಲುಗಳು ದಿಲ್ಲಿ ಮತ್ತು ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗೆ ತಲೆನೋವಾಗಿದೆ.

ಮಧ್ಯಪ್ರದೇಶ , ರಾಜಸ್ಥಾನ ಮತ್ತು ಛತ್ತೀಸ್ ಗಢದ ಸೋಲುಗಳು ಬಿಜೆಪಿಗೆ ಭಾರೀ ಹೊಡೆತ ನೀಡಿದೆ. 2017ರಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಮತ್ತು 2019ರಲ್ಲಿ ಬಿಜೆಪಿ ಆಡಳಿತ ಹೊಂದಿರುವ ನಕ್ಷೆ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News