ಜಾರ್ಖಂಡ್‌ನಲ್ಲಿ ಮೈತ್ರಿಕೂಟದ ಸರಕಾರ, ಹೇಮಂತ್ ಸೊರೇನ್ ಸಿಎಂ: ಕಾಂಗ್ರೆಸ್

Update: 2019-12-23 16:07 GMT

ರಾಂಚಿ,ಡಿ.23: ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಸರಕಾರವನ್ನು ರಚಿಸಲಿದ್ದು,ಹೇಮಂತ ಸೊರೇನ್ ಅವರು ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

 ರಾಜ್ಯದ ಜನರ ಬದುಕು ಮತ್ತು ಜೀವನೋಪಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಿಷಯಗಳನ್ನಿಟ್ಟುಕೊಂಡು ಅವರಿಗಾಗಿ ನಾವು ಚುನಾವಣೆಯಲ್ಲ್ಲಿ ಹೋರಾಡಿದ್ದೇವೆ. ಸರಕಾರವನ್ನು ನಾವೇ ರಚಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆೆಯಲು ಪ್ರಯತ್ನಿಸಿದ್ದರು,ಆದರೆ ಜನರು ಅದಕ್ಕೆ ಅದನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದ ಜಾರ್ಖಂಡ್‌ನ ಕಾಂಗ್ರೆಸ್ ಉಸ್ತುವಾರಿ ಆರ್‌ಪಿಎನ್ ಸಿಂಗ್ ಅವರು,ಮೊದಲೇ ಘೋಷಿಸಿರುವಂತೆ ಜೆಎಂಎಂ ನಾಯಕ ಹೇಮಂತ್ ಸೊರೇನ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.

ಜಾರ್ಖಂಡ್ ಚುನಾವಣಾ ಫಲಿತಾಂಶವು ಬಿಜೆಪಿಯ ಭ್ರಷ್ಟಾಚಾರ ಮತ್ತು ಸೊಕ್ಕಿಗೆ ಸಂದಿರುವ ಸೋಲು ಆಗಿದೆ ಎಂದು ಜಾರ್ಖಂಡ್ ಚುನಾವಣೆಗೆ ಕಾಂಗ್ರ್ರೆಸ್ ಸಮನ್ವಯಕಾರರಾಗಿದ್ದ ಅಜಯ್ ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News