ಯಾವುದೇ ಕಾರಣಕ್ಕೂ ಆಂಧ್ರ ಪ್ರದೇಶವು ಎನ್‌ಆರ್‌ಸಿಗೆ ಬೆಂಬಲ ನೀಡಲ್ಲ: ಜಗನ್
Update: 2019-12-23 22:38 IST
ಹೈದರಾಬಾದ್: ಯಾವುದೇ ಸನ್ನಿವೇಶದಲ್ಲೂ ಆಂಧ್ರ ಪ್ರದೇಶವು ಎನ್ ಆರ್ ಸಿಗೆ ಬೆಂಬಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಸಿಎಎ ವಿರುದ್ಧ ರಾಷ್ಟ್ರಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಜಗನ್ ರಿಂದ ಈ ಹೇಳಿಕೆ ಹೊರಬಿದ್ದಿದೆ.
"ಎನ್ ಆರ್ ಸಿ ಬಗ್ಗೆ ನಾನು ಹೇಳಿಕೆ ನೀಡಬೇಕೆಂದು ನನ್ನ ಅಲ್ಪಸಂಖ್ಯಾತ ಸಹೋದರರು ಹೇಳುತ್ತಲೇ ಇದ್ದರು. ನಾವು ಎನ್ ಆರ್ ಸಿಯನ್ನು ವಿರೋಧಿಸುತ್ತೇವೆ ಮತ್ತು ಎನ್ ಆರ್ ಸಿಯನ್ನ ಆಂಧ್ರಪ್ರದೇಶವು ಎಂದಿಗೂ ಬೆಂಬಲಿಸುವುದಿಲ್ಲ" ಎಂದವರು ಹೇಳಿದರು.