ದಿಲ್ಲಿ ತಂಡಕ್ಕೆ ಇಶಾಂತ್, ಧವನ್ ಸೇರ್ಪಡೆ
Update: 2019-12-23 23:46 IST
ಹೊಸದಿಲ್ಲಿ, ಡಿ.23: ಹೈದರಾಬಾದ್ ವಿರುದ್ಧ ಡಿ.25ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ದಿಲ್ಲಿ ತಂಡಕ್ಕೆ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಹಾಗೂ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಸೇರ್ಪಡೆಯಾಗಲಿದ್ದಾರೆ. ಬಿಸಿಸಿಐನ ಕಾರ್ಯಭಾರ ನಿರ್ವಹಣೆ ಕಾರ್ಯಕ್ರಮದ ಅಂಗವಾಗಿ ಇಶಾಂತ್‌ಗೆ ಕೆಲವು ರಣಜಿ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿತ್ತು. ನ್ಯೂಝಿಲ್ಯಾಂಡ್ ಟೆಸ್ಟ್ ಪ್ರವಾಸಕ್ಕಿಂತ ಮೊದಲು ಒಂದಷ್ಟು ತಾಲೀಮು ನಡೆಸಲು ಇಶಾಂತ್ ನಿರ್ಧರಿಸಿದ್ದಾರೆ. ಧವನ್‌ಗೆ ಮಹಾರಾಷ್ಟ್ರ ವಿರುದ್ಧ ದಿಲ್ಲಿ ಪರವಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ ಪಂದ್ಯ ಆಡುವಾಗ ಬಲಮಂಡಿಗೆ ತೀವ್ರ ಗಾಯವಾಗಿತ್ತು. ಅವರಿಗೆ 25 ಹೊಲಿಗೆಯನ್ನು ಹಾಕಲಾಗಿತ್ತು ಎಂದು ಬಿಸಿಸಿಐ ವೈದ್ಯಕೀಯ ತಂಡ ತಿಳಿಸಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಧವನ್ ಫಿಟ್ ಇದ್ದಾರೆಂದು ಘೋಷಿಸಿದ್ದು, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲು ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ.